ವಿಷ್ಣು ಸ್ಮರಣಾರ್ಥ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ
ವಿಷ್ಣು ಅಭಿಮಾನಿಗಳಿಂದ ಶಾಲಾ ಮಕ್ಕಳಿಗೆ ಭೋಜನ ವ್ಯವಸ್ಥೆ
ಯಾದಗಿರಿ, ಶಹಾಪುರಃ ಪಟ್ಟಣದ ಗಣೇಶ ನಗರದಲ್ಲಿರುವ ವಿಶ್ವಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ವಿಷ್ಣು ಸೇನಾ ಸಮಿತಿಯಿಂದ ದಿ.ಚಿತ್ರ ನಟ ವಿಷ್ಣುವರ್ಧನ ಅವರ 9ನೇ ಜನ್ಮದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪಠ್ಯ, ಪುಸ್ತಕ, ನೋಟ್ ಬುಕ್ ಮತ್ತು ಪೆನ್ನುಗಳನ್ನು ಉಚಿತವಾಗಿ ನೀಡಲಾಯಿತು.
ಅಲ್ಲದೆ ವಿಷ್ಣು ಸ್ಮರಣಾರ್ಥ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಜೊತೆಗೆ ಭೋಜನಾ ವಯವಸ್ಥೆ ಕಲ್ಪಿಸಲಾಗಿತ್ತು.
ಮೊದಲಿಗೆ ಸೇನಾ ಸಮಿತಿಯಿಂದ ನಡೆದ ವಿಷ್ಣು ಅವರ ಭಾವಚಿತೆಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಉದಯಕುಮಾರ ನಾಗನಟಗಿ, ವಿಷ್ಣುವರ್ಧನ ಅವರು ಕನ್ನಡ ಚಿತ್ರರಂಗದ ದಿಗ್ಗಜ ನಾಯಕರಾಗಿ, ಅಲ್ಲದೆ ಬಡವ ಕಲಾವಿದರ ರಕ್ಷಕರಾಗಿ, ಸಾಕಷ್ಟು ಸಹಾಯ ಸಹಕಾರವನ್ನು ನೀಡಿದ್ದಾರೆ.
ಕನ್ನಡನಾಡಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರು ಸಾಕಷ್ಟು ಜನರಿಗೆ ಸಹಾಯ ಹಸ್ತ ನೀಡಿದ್ದಾರೆ. ಆದರೆ ಎಲ್ಲೀ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅವರಿಂದ ಸಹಾಯ ಸಹಕಾರ ಪಡೆದವರಿಗೆ ವಿಷ್ಣುವರ್ಧನ ಏನೆಂದು ಗೊತ್ತಿದೆ. ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ಗೊತ್ತಾಗಬಾರದೆಂಬಂತೆ ಅವರು ಬದುಕಿದ್ದಾರೆ.
ನೂರಾರು ಕಲಾವಿದರನ್ನು ಬೆಳೆಸಿದ್ದಾರೆ. ತಾವೂ ಬೆಳೆದಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾದಲ್ಲಿಯೇ ಅಂತಹ ಕಲಾವಿದರು ದೊರೆಯವುದು ಅಪರೂಪ. ಅವರೊಬ್ಬರು ಅಪರೂಪದ ಮಾಣಿಕ್ಯ ಎಂದರು.
ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯ, ಪುಸ್ತಕ ವಿತರಿಸಲಾಯಿತು. ನಂತರ ಎಲ್ಲರೂ ಭೋಜನ ಸವಿದರು. ಈ ಸಂದರ್ಭದಲ್ಲಿ ರವಿಕುಮಾರ ದೇವರಮನಿ, ಗುರುನಾಥ ಬಾಣತಿಹಾಳ, ಶಿಕ್ಷಕ ಈರಣ್ಣ, ಯಲ್ಲಪ್ಪ ನಾಗನಟಗಿ, ಮಹೇಶ ಅನವಾರ, ಚಂದ್ರಶೇಖರ ಹೊಸ್ಮನಿ, ಶಿವರಾಜ ಮಡಿವಾಳರ್, ಮರಿಲಿಂಗಪ್ಪ ಬಡಿಗೇರ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.