ವಿನಯ ವಿಶೇಷ
ವಿಷ ಬೆರಿಸಿದ್ದ ದೊಡ್ಡಯ್ಯನ ದೊಡ್ಡಾಟ ಬಯಲು
ಚಾಮರಾಜನಗರಃ ತಾಲೂಕಿನ ಸುಳ್ಳಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ನಡೆದ ಘಟನೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾರಮ್ಮ ದೇವಾಲಯದ ಹತ್ತಿರವಿರುವ ನಾಗರಕೋವಿ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ ದೊಡ್ಡಯ್ಯ ಸುಳ್ಳಾಡಿ ನಾನೇ ವಿಷ ಹಾಕಿದ್ದೇಣೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿ ದೊಡ್ಡಯ್ಯ ಸೂಳ್ಳಾಡಿ ದೇವಸ್ಥಾನದ ಸಮೀಪ ಬರುವ ನಾಗರಕೋವಿ ದೇವಿಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ, ಈತನನ್ನು ಅರ್ಚಕನಾಗಿ ನೇಮಿಸಿದ್ದು ಇಮ್ಮಡಿ ಮಹಾದೇವ ಸ್ವಾಮೀ ಎನ್ನಲಾಗಿದೆ. ಎರಡು ವರ್ಷದಿಂದ ನಾಗರಕೋವಿ ದೇಗುಲದಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.
ಮಹಾದೇವ ಸ್ವಾಮೀಜಿಯವರ ಋಣ ತೀರಿಸಲು ಮಹಾದೇವ ಸ್ವಾಮೀಜಿ ಹೇಳಿದಂತೆ ಪ್ರಸಾದದಲ್ಲಿ ವಿಷ ಬೆರೆಸುವ ಕಾರ್ಯವನ್ನು ಆರೋಪಿ ದೊಡ್ಡಯ್ಯ ಸುಳ್ಳಾಡಿ ಮಾಡಿದ್ದಾನೆ ಎನ್ನಲಾಗಿದೆ. ಸಧ್ಯ ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ದೊಡ್ಡಯ್ಯನ ವಿಚಾರಣೆ ಮುಂದುವರೆದಿದೆ ಎನ್ನಲಾಗಿದೆ.