ಅಂಕಣವಿನಯ ವಿಶೇಷ

ವಿಶ್ವ ಕೈ ತೊಳೆಯುವ ದಿನಾಚರಣೆ ವಿಶೇಷ ಲೇಖನ

ಲೇಖಕ ಶಿವಕುಮಾರ ಬಿ. ಅವರ ಬರಹ ಓದಿ

ವಿಶ್ವ ಕೈ ತೊಳೆಯುವ ದಿನಾಚರಣೆ: ನಮ್ಮ ಆರೋಗ್ಯ‌ ನಮ್ಮ ಕೈಯಲ್ಲಿದೆ

ವೈಯಕ್ತಿಕ ಸ್ವಚ್ಛತೆಗಾಗಿ ಕೈತೊಳೆಯುವ ವಿಧಾನಗಳು ರೂಡಿಸಿಕೊಳ್ಳುವುದ್ಹೇಗೆ

ಜಾಗತಿಕ ಮಟ್ಟದಲ್ಲಿ ಕೈ ತೊಳೆಯುವ ವಿಧಾನಗಳನ್ನು ತಿಳಿಸಲು ಪ್ರತಿ ವರ್ಷಯು ಅಕ್ಟೋಬರ್ ೧೫ ರಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಣೆ ಮಾಡಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೆರೇಪಿಸುವ ಕಾರ್ಯಕ್ರಮ.

ಸಾಮಾನ್ಯವಾಗಿ ಜನರಲ್ಲಿ ಬರುವ ಭಾವನೆ ಏನು ಅಂದ್ರೆ ನಾವು ಯಾರು ಕೈ ತೊಳೆಯುತ್ತಿಲ್ವಾ ಅಂತಾ!
ಆದರೆ ನಾವು ದಿನ ನಿತ್ಯ ಶೌಚ ಮಾಡಿದ ನಂತರ, ಊಟ ಮಾಡುವ ಮುನ್ನ, ಇತರೆ ಕೆಲಸ ಮಾಡಿದ ನಂತರ ನಮ್ಮ ಕೈಗಳನ್ನು ಸಾಬೂನನಿಂದ ಸರಿಯಾಗಿ ಉಜ್ಜಿ ಎಷ್ಟು ಜನ ತೊಳೆಯುತ್ತಿದ್ದೆವೆ ಎಂದು ನೋಡಿದಾಗ ಆ ಸಂಖ್ಯೆ ಕಡಿಮೆ.

ಇಂತ ಸಾಮಾನ್ಯ ಕೆಲಸವನ್ನು ಇಲಾಖೆ, ಕಚೇರಿಯಿಂದ ಮಾಡಬಹುದಾದ ಕಾರ್ಯಕ್ರಮ‌ನಾ ಎಂದು ಕೆಲವುರು ಕೇಳುವುದು ಸಾಮಾನ್ಯ.
*ವಿಶ್ವ ಸಂಸ್ಥೆ ಹಾಗೂ ಯುನಿಸೆಫ್ ಸಂಸ್ಥೆಯ* ಕೈ ತೊಳೆಯುದರಿಂದ ಆಗಬಹುದಾದ ಕೆಲವು ಉಪಯೋಗಗಳು ಆರೋಗ್ಯದ ಸುರಕ್ಷತೆ ಕುರಿತು ಅಧ್ಯಾಯನ ನಡಿಸಿ, ಪ್ರತಿ ವರ್ಷಯು ಅಕ್ಟೊಬರ್ ೧೫ ರಂದು ಒಂದೊಂದು ಥೀಮ್ ( ಘೋಷ ವಾಕ್ಯದೊಂದಿಗೆ) ವಿಶ್ವ ಕೈ ತೊಳೆಯುವ ದಿನ ಎಂದು ಆಚರಿಸಿ ಅದರ ಮಹತ್ವ ಉದ್ದೇಶ, ಇದರಿಂದಾಗುವ ಉಪಯೋಗಗಳ ಕುರಿತು ಶಾಲಾ- ಕಾಲೇಜು ಮಕ್ಕಳಲ್ಲಿ, ಮಹಿಳೆಯರಲ್ಲಿ, ಯುವಕರಲ್ಲಿ ಹಾಗೂ ಸಮುದಾಯಗಳಲ್ಲಿ ಜನರನ್ನು ಸೇರಿಸಿ, ಸಾಬೂನು ನಿಂದ ಉಜ್ಜಿ ಕೈತೊಳೆಯುವ ವಿಧಾನಗಳನ್ನು ತಿಳಿಸಿ ನಿತ್ಯವು ಇದನ್ನು ಅಳವಡಿಸಿಕೊಳ್ಳುವಂತೆ ಜನರಲ್ಲಿ ತಿಳಸಬೇಕಾಗಿದೆ.

ಈ. ವಷರ್ದ ಘೋಷವಾಕ್ಯವು ನಾವು ಎಲ್ಲರು *ಸ್ವಚ್ಛಕೈಗಳ ವ್ಯಾಪ್ತಿಗೆ ನಾವು* ಎಂದು ಆರೋಗ್ಯಕ್ಕೆ ಉಪಯುಕ್ತವಾದ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಅಂದಾಗ ಈ ವಿಶ್ವ ವ್ಯಾಪ್ತಿಯಾಗಿ ನಡಯುವ ಈ ಇಂತಹ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗುತ್ತೆ.

*ಮಹತ್ವ* ಸಾಮಾನ್ಯವಾಗಿ ಕೈಗಳಿಂದ ಬಾಯಿ, ಮುಗಿಗೆ ಸ್ಪರ್ಶಮಾಡುವುದರಿಂದ ಕೈಗಳಿಂದ ನಮ್ಮ ದೇಹದೊಳಗೆ ವೈರಾಣುಗಳು, ಸೂಕ್ಷ್ಮಾಣುಗಳು ಪ್ರೇವೆಸಿಸಿ ಆರೋಗ್ಯದಲ್ಲಿ ಏರು ಪೇರು ಅಥವಾ ಸಣ್ಣ- ಪುಟ್ಟ ಕಾಯಿಲೆಗಳು ಬರುವ ಸಂದರ್ಭ ಇರುತ್ತದೆ.
ಹಾಗೂ ಶೌಚ ಮಾಡಿದ ನಂತರ , ಊಟಕ್ಕೂ ಮುಂಚೆ, ಇತರೆ ಕೆಲಸ ಕಾರ್ಯಗಳು ಮಾಡಿದ ನಂತರ ಕೈಗಳನ್ನು ಸ್ವಚ್ಛವಾಗಿ ಸಾಬೂನು ನಿಂದ ಉಜ್ಜಿ ತೊಳೆಯುವ ಅಭ್ಯಾಸಗಳನ್ನು ರೂಡಿಸಿಕೊಳ್ಳುವುದರಿಂದ ನಮ್ಮ ಕೈಗಳಿಂದ ದೇಹದೊಳಗೆ ಸೇರಬಹುದಾದ ರೋಗಾಣು- ಕೀಟಾಣು ಹಾಗೂ ಸೂಕ್ಷ್ಮಾಣುಗಳಿಂದ ಹರಡಬಹುದಾದ ಕಾಯಿಲೆಗಳನ್ನು ತಪ್ಪಿಸಬಹುದಾಗಿದೆ.

ಎಳು ವಿಧಾನಗಳಲ್ಲಿ ಕೈಗಳನ್ನು ಉಜ್ಜಿ ತೊಳೆಯವುದು

೧) ಎರಡು ಕೈಗಳನ್ನು ನೀರಿನಿಂದ ಒದ್ದೆ ಮಾಡಿಕೊಳ್ಳುವುದು.

೨) ಎರಡು ಅಂಗೈಗಳನ್ನು ಸಾಬೂನುನೊಂದಿಗೆ ಉಜ್ಜುವುದು.

೩) ಎರಡು ಕೈಗಳ ಬೆರಳು ಸಂದಿಯಲ್ಲಿ ಪರಸ್ಪರ ಉಜ್ಜುವುದು.

೪) ಹಸ್ತದ ಹಿಂಬದಿ ಬೆರಳು ಸಂದಿಯ ಉಜ್ಜುವುದು.

೫) ಬೆರಳುಗಳ ತುದಿಯೊಂದಿಗೆ ಅಂಗೈಯಲ್ಲಿ ಉಜ್ಜುವುದು.

೬) ಎಬ್ಬೆರಳಿನ ಸುತ್ತ ಉಜ್ಜುವುದು.

೭) ನೀರಿನಿಂದ ಕೈ ತೊಳೆದುಕೊಳ್ಳುದು.

ಈ ಎಲ್ಲಾ ಪ್ರಕ್ರಿಯೆ ಕನಿಷ್ಠ ೨೦ ರಿಂದ ೩೦ ಸೆಕೆಂಡೆಗಳವರೆಗೆ ಉಜ್ಜುವುದು.

ಈ ವಿಧಾನಗಳನ್ನು ಅನುಸರಿಸಿ ಪ್ರತಿನಿತ್ಯ ಮಾಡುವುದರಿಂದ ನಮ್ಮ ದೇಹದಲ್ಲಿ ವೃರಾಣು, ರೋಗಾಣುಗಳು ಸೇರಿ ಆರೋಗ್ಯದಲ್ಲಿ ಆಗಬಹುದಾದ ಏರು ಪೇರು ಆಗುವುದನ್ನು ತಪ್ಪಿಸಿ *ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿದೆ* ಎಂಬಹುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಆಗಾಗಿ ನಾವು ಎಲ್ಲರೂ ಜಾಗತಿಕ ಮಟ್ಟದಲ್ಲಿ ಆಚರಿಸುವ ಈ ಕೈ ತೊಳೆಯುವ ದಿನಾಚರಣೆಯನ್ನು ಸರಿಯಾದ ವಿಧಾನಗಳಲ್ಲಿ ಕೈಗಳನ್ನು ಉಜ್ಜಿ ತೊಳೆಯುವ ಅಭ್ಯಾಸ ರೂಡಿಸಿಕೊಳ್ಳುವುದರಿಂದ ರೂಡಿಗತ ವರ್ತನೆಯಲ್ಲಿ ಬದಲಾವಣೆ ತರುವ ಮೂಲಕ ದಿನಾಚರಣೆಯನ್ನು ಆಚರಿಸಿಸೋಣಾ.

ಶಿವಕುಮಾರ ಬಿ.
ಜಿಲ್ಲಾ ಐ.ಇ.ಸಿ ಸಮಾಲೋಚಕರು
ಸ್ವಚ್ಛ ಭಾರತ ಮಿಷನ್ (ಗ್ರಾ)
ಜಿ.ಪಂ.ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button