ವಿನಯ ವಿಶೇಷ
ತಿರುಪತಿ ತಿಮ್ಮಪ್ಪನ ಪಾದಕ್ಕೆ ಹದಿನಾಲ್ಕು ಕೋಟಿ!
ತಿರುಪತಿ: ವಿಶ್ವವಿಖ್ಯಾತ ತಿರುಪತಿ ವೆಂಕಟೇಶನಿಗೆ ನಿತ್ಯವೂ ಭಕ್ತಗಣದಿಂದ ದೇಣಿಗೆ ರೂಪದಲ್ಲಿ ಹಣದ ಹೊಳೆ ಹರಿದು ಬರುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನ ಅನಿವಾಸಿ ಭಾರತೀಯ ಉದ್ಯಮಿಗಳಿಬ್ಬರು ಒಟ್ಟು 14ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತಿರುಪತಿ ದೇಗುಲದ ವಿಶೇಷಾಧಿಕಾರಿ ಎ.ವಿ.ಧರ್ಮರೆಡ್ಡಿ ಅವರಿಗೆ 14ಕೋಟಿ ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್ ನಿಡಿದ್ದಾರೆ. ಆದರೆ, ದೇಣಿಗೆ ನೀಡಿದ ಉದ್ಯಮಿಗಳು ತಮ್ಮ ಹೆಸರನ್ನು ಬಹಿರಂಗಗೊಳಿದಂತೆ ಮನವಿ ಮಾಡಿದ್ದಾರೆ. ಕಳೆದ ವರ್ಷವೂ ಈ ಉದ್ಯಮಿಗಳು 13.5ಕೋಟಿ ರೂಪಾಯಿ ದೇಣಿಗೆ ನೀಡಿದ್ದರು ಎಂದು ತಿಳಿದು ಬಂದಿದೆ.