ಪ್ರಮುಖ ಸುದ್ದಿ
BIG NEWS – ರವಿವಾರ ಶಾಲಾ ಕಾಲೇಜುಗಳಿಗೆ ರಜೆ ಕ್ಯಾನ್ಸಲ್
ರವಿವಾರ ಶಾಲಾ ಕಾಲೇಜುಗಳಿಗೆ ರಜೆ ಕ್ಯಾನ್ಸಲ್
ಬೆಂಗಳೂರಃ ರವಿವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನ ಹಿನ್ನೆಲೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಶ್ವ ಮಾನವ ದಿನ ಆಚರಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ನಿರ್ದೇಶಕ ಸೂಚಿಸಿದ್ದು, ರವಿವಾರ ಶಾಲಾ ಕಾಲೇಜಿಗೆ ರಜೆ ಕ್ಯಾನ್ಸಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಿಶ್ವಮಾನವ ದಿನಾಚರಣೆ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿಶ್ವ ಮಾನವ ಸಂದೇಶ ಕುರಿತಂತೆ ವಿಚಾರಗೋಷ್ಠಿ ನಡೆಸಬೇಕೆಂದು ಶಿಕ್ಷಣ ಇಲಾಖೆ ನಿರ್ದೇಶಕ ರಿಂದ ಜ್ಞಾಪನಾ ಪತ್ರ ಕಳುಹಿಸಲಾಗಿದೆ.
ಈ ಹಿನ್ನೆಲೆ ರವಿವಾರ ವಿಶ್ವಮಾನವ ದಿನಾಚರಣೆ ಆಚರಿಸಬೇಕು. ಜೊತೆಗೆ ವಿಚಾರಗೋಷ್ಠಿಗಳು ನಡೆಸುವ ಪ್ರಯುಕ್ತ ಶಾಲಾ ಕಾಲೇಜುಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.