ಪ್ರಮುಖ ಸುದ್ದಿ

ವಿಶ್ವರಾಧ್ಯರ ಮಹಾತ್ಮೆ ಚಿತ್ರ ವೀಕ್ಷಿಸಿದ ಡಾ.ಗಂಗಾಧರ ಶ್ರೀ, ಸ್ಥಳೀಯ ಶಾಸಕ ಶಿರವಾಳ

 

ಹಲವಾರು ಮಠಾಧೀಶರ ಜೊತೆಗೆ ಚಿತ್ರ ವೀಕ್ಷಣೆಗೆ ಹರಿದು ಬಂದ ಭಕ್ತ ಸಾಗರ

ಯಾದಗಿರಿಃ ಸಿದ್ಧಿಪುರುಷ ಸದ್ಗುರು ಶ್ರೀವಿಶ್ವರಾಧ್ಯರ ಜೀವನಾಧರಿತ ಭಕ್ತಿ ಪ್ರಧಾನ ಚಲನ ಚಿತ್ರ ವೀಕ್ಷಣೆಗೆ ಜಿಲ್ಲೆಯ ಶಹಾಪುರ ನಗರದ ಜಯಶ್ರೀ ಚಿತ್ರ ಮಂದಿರಕ್ಕೆ ಶುಕ್ರವಾರ ಅಬ್ಬೆತುಮಕೂರಿನ ಶ್ರೀ ಸದ್ಗುರ ವಿಶ್ವರಾಧ್ಯರ ಸಿದ್ಧ ಸಂಸ್ಥಾನದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರೊಡನೆ ಚಿತ್ರ ವೀಕ್ಷಿಸಲು ಭಕ್ತ ಸಾಗರವೇ ಹರಿದು ಬಂದಿತು.

ಸ್ಥಳೀಯ ಇತರೆ ಶ್ರೀಗಳೊಂದಿಗೆ ಮೂರು ತಾಸು ಕುಳಿತು ಸಂಪೂರ್ಣ ಚಿತ್ರ ವೀಕ್ಷಿಸಿದ ಡಾ.ಗಂಗಾಧರ ಶ್ರೀಗಳು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವರಾಧ್ಯರ ಮಹಿಮೆ ಕುರಿತು ಚಿತ್ರದಲ್ಲಿ ನಟ ನಟಿಯರು ಅತ್ಯಂತ ಅದ್ಭುತವಾಗಿ ನಟಿಸಿದ್ದಾರೆ. ಭಕ್ತಾಧಿಗಳಲ್ಲಿ ಮಹಾಮಹಿಮರ ಚರಿತ್ರೆ ಚಿತ್ರ ರೂಪದಲ್ಲಿ ನೋಡುವದರಿಂದ ಮೈಪುಳಕಿತಗೊಂಡಿದೆ.

ವಿಶ್ವರಾಧ್ಯರ ಮಹಾತ್ಮೆ ಕುರಿತು ಕನ್ನಡ ಚಲನಚಿತ್ರ ಮಾಡಿರುವದಕ್ಕೂ ಸಾರ್ಥಕವಾಯಿತು. ಸದ್ಗುರ ವಿಶ್ವರಾಧ್ಯರ ಚರಿತ್ರೆ ಎಲ್ಲಡೆ ಪಸರಿಸುವಂತಾಯಿತು. ಇದಿರಂದ ಅವರ ಭಕ್ತರಿಗೆ ಅಪಾರ ಸಂತಸ ತಂದಿದೆ. ಮತ್ತೊಮ್ಮೆ ಮಗದೊಮ್ಮೆ ಚಿತ್ರ ನೋಡುವದರಿಂದ ಸಾಕ್ಷಾತ್ ವಿಶ್ವರಾಧ್ಯರ ಜೀವನದಲ್ಲಿ ನಾವುಗಳು ಭಾಗಿಯಾಗಿದ್ದೇವೆ ಎಂದೆನಿಸುತ್ತದೆ ಎಂದು ಭಕ್ತರ ಅಭಿಪ್ರಾಯವಾಗಿದ್ದು, ಸದ್ಭಕ್ತರು ಚಿತ್ರ ನೋಡಿ ಭಾವಪರವಶರಾಗಿದ್ದಾರೆ. ಸಾಕ್ಷಾತ್ ಸದ್ಗುರುಗಳನ್ನು ಕಂಡಷ್ಟು ಸಂತೋಚವನ್ನು ವ್ಯಕ್ತವಾಗಿದೆ ಎಂದರು.
ಚಲನಚಿತ್ರದಿಂದ ಭಕ್ತಾಧಿಗಳಿಂದ ಉತ್ತಮ ಪ್ರತಿಕ್ರಿಯೆ ಇದ್ದು, ಭಕ್ತಾಧಿಗಳಲ್ಲೂ ಪರಿವರ್ತನೆ ಉಂಟಾಗಲಿ. ಸದ್ಗುರು ಶ್ರೀವಿಶ್ವರಾಧ್ಯರು ಅವರನ್ನು ಹರಸಲಿ ಎಂದು ಆಶಿಸಿದರು.

ಚಲನ ಚಿತ್ರ ಕಳೆದ 23 ರಂದು ಬಿಡುಗಡೆಯಾಗಿದ್ದು, ಎರಡನೇ ವಾರದಲ್ಲಿ ಮುನ್ನುಗ್ಗುತ್ತಿದೆ. ಹೀಗೆ ಶತದಿನೋತ್ಸವ ಆಚರಿಸಲಿ. ಅದರಲ್ಲಿ ನಟಿಸಿರುವ ನಟ ನಟಿಯರಿಗೆ ಶ್ರೀದೇವರು ಒಳ್ಳೆಯದು ಮಾಡಲಿ ಎಂದರು.

ಈ ಸಂದರ್ಭದಲ್ಲಿ ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು, ಕನ್ಯಾಕೋಳೂರದ ಚನ್ನಬಸವ ಶಿವಾಚಾರ್ಯರು, ದೋರನಹಳ್ಳಿ ವೀರಮಹಾಂತ ಶಿವಾಚಾರ್ಯರು, ಜಯಶ್ರೀ ಚಿಂತ್ರಮಂದಿರ ಮಾಲೀಕರಾದ ಉದಯಶಂಕರ ಶೆಟ್ಟಿ, ಮುಖಂಡರಾದ ಚಂದ್ರಶೇಖರ ಆರಬೋಳ, ಶಿವಶರಣಪ್ಪ ಕಲಬುರ್ಗಿ, ಸಂಗಣ್ಣ ಮೋಟಗಿ, ಚನ್ನಪ್ಪಗೌಡ ಶಿರವಾಳ, ಅಣ್ಣಾರಾವ್ ಪಾಟೀಲ್, ಶರಣಪ್ಪ ವಾರದ, ಉಮೇಶ ಗೋಗಿ, ಸಿದ್ದಣ್ಣ ಆರಬೋಳ, ಮಹೇಶ ಗಂವಾರ, ಬಸನಗೌಡ ಸುಬೇದಾರ, ಲಿಂಗಣ್ಣ ಪಡಶೆಟ್ಟಿ, ಶಿವನಗೌಡ ಮದ್ರಿಕಿ, ಮಲರಡ್ಡೆಪ್ಪಗೌಡ ಹೋತಪೇಟ ಸೇರಿದಂತೆ ಇತರರು ಇದ್ದರು.

ವಿಶ್ವರಾಧ್ಯರ ಮಹಾತ್ಮೆ ಚಿತ್ರ ವೀಕ್ಷಿಸಿದ ಶಾಸಕ ಶಿರವಾಳ

ನಗರದ ಜಯಶ್ರೀ ಚಿತ್ರ ಮಂದಿರದಲ್ಲಿ ಕಳೆದ ವಾರ ಮಾ.23 ರಂದು ಯಾದಗಿರಿ ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರಿನ ಶ್ರೀವಿಶ್ವರಾಧ್ಯರ ಮಹಾತ್ಮೆ ಕುರಿತಾದ ಚಲನ ಚಿತ್ರ ಬಿಡುಗಡೆಯಾಗಿದ್ದು, ವೀಕ್ಷಣೆಗೆ ಶುಕ್ರವಾರ ಸ್ಥಳೀಯ ಶಾಸಕ ಗುರು ಪಾಟೀಲ್ ಹಾಗೂ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿ ವೀಕ್ಷಿಸಿದರು.

ಚಿತ್ರ ವೀಕ್ಷಿಸಿದ ಶಾಸಕ ಗುರು ಪಾಟೀಲ್, ಇದೇ ಮೊದಲ ಬಾರಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದು, ಭಕ್ತಿ ಪ್ರಧಾನವಾದ ಚಿತ್ರ ವಿಶ್ವರಾಧ್ಯರ ಪವಾಡ ಕುರಿತಾದ ಚಿತ್ರ ವೀಕ್ಷಣೆಯಿಂದ ಮಹಾದಾನಂದವಾಯಿತು.

ಬಾಲ್ಯದಲ್ಲಿ ಹಲವಾರು ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಸ್ಥಳೀಯವಾಗಿ ಬಹಳಷ್ಟು ದಿನಗಳ ನಂತರ ಚಿತ್ರ ವೀಕ್ಷಣೆಗೆ ಆಗಮಿಸಿದ್ದೇನೆ. ಸದ್ಗುರು ಚರಿತ್ರೆ ಕುರಿತಾದ ಚಿತ್ರ ವೀಕ್ಷಣೆಯಿಂದ ಸದ್ಗುರುಗಳ ಮಹಿಮೆ ಗೋಚರವಾಯಿತು. ಇಂತಹ ಪವಾಡ ಪುರುಷರು ನಮ್ಮ ನೆಲದಲ್ಲಿ ಜನ್ಮಿಸಿದ್ದು, ನಮ್ಮೆಲ್ಲರ ಪುಣ್ಯ. ಸಾಮಾಜಿಕ ಬದುಕಿನ ದಿಕ್ಕನ್ನೆ ಬದಲಾಯಿಸುವ ಶಕ್ತಿ ಸತ್ಪುರುಷರಲ್ಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button