#VoiceOfYadgirMedicalCollege : ಯಾದಗಿರಿ ಜಿಲ್ಲೆಯ ಜನ ಏನಂತಾರೆ?
ಜೂನ್ 21 ರಂದು ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಜಲಧಾರೆ ಸೇರಿ ಅನೇಕ ಯೋಜನೆಗಳನ್ನು ಘೋಷಿಸಿ, ಜನರ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನೂ ಸೂಚಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವುದರಿಂದ ಸ್ಥಳೀಯರಿಗೆ ಉಪಯೋಗ ಆಗದು ಎಂದು ಹೇಳುವ ಮೂಲಕ ಯಾದಗಿರಿಗೆ ಮೆಡಿಕಲ್ ಕಾಲೇಜು ನೀಡಲ್ಲ ಎಂಬುದನ್ನು ಸೂಚಿಸಿದ್ದರು. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಈಗ ಜಿಲ್ಲೆ ಮಾತ್ರವಲ್ಲದೆ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಜಿಲ್ಲೆಯ ಜನರು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಹೋರಾಟಗಾರರು, ಇತರೆ ಕ್ಷೇತ್ರದ ಗಣ್ಯರ ಅಭಿಪ್ರಾಯಗಳೇನು ಎಂಬುದನ್ನು ಪ್ರಕಟಿಸಲು ವಿನಯವಾಣಿ ವೇದಿಕೆ ರೂಪಿಸಿದೆ. “ನಮ್ಮ ಊರು ನಮ್ಮ ಮಾತು” ಶೀರ್ಷಿಕೆ ಅಡಿಯಲ್ಲಿ ಅಭಿಯಾನ ಆರಂಭಿಸಿದ್ದು ‘ವಿನಯವಾಣಿ ಜನದನಿ’ ಗೆ ತಾವೂ ದನಿಗೂಡಿಸಿ…
ನಿಮ್ಮ ಅಭಿಪ್ರಾಯ ಕಳಿಸಿ
ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜಿನ ಅಗತ್ಯತೆ? ಹಾಗೂ ಯಾದಗಿರಿ ಮೆಡಿಕಲ್ ಕಾಲೇಜು ಕುರಿತು ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸ್ಪಷ್ಟವಾಗಿ, ಪುಟ್ಟದಾಗಿ ಬರೆದು ನಮಗೆ ವಾಟ್ಸಪ್ ಮಾಡಿ. ನಾವು ಪ್ರಕಟಿಸುತ್ತೇವೆ. ಆ ಮೂಲಕ ಜಿಲ್ಲೆಯ ಜನರ ಅಭಿಪ್ರಾಯವನ್ನು ಆಳುವವರ ಕಣ್ಣು, ಕಿವಿಗೆ ತಲುಪಿಸುವ ಪುಟ್ಟ ಪ್ರಯತ್ನವನ್ನು ಮಾಡೋಣ ಬನ್ನಿ…
– ಮಲ್ಲಿಕಾರ್ಜುನ ಮುದನೂರ್
ಸಂಪಾದಕರು, ವಿನಯವಾಣಿ
vinayavani.com
WhatsApp : 9448405608