ಪ್ರಮುಖ ಸುದ್ದಿ
ಸಾಮರಸ್ಯ ನಡಿಗೆ ಸ್ಥಳದಲ್ಲಿ ಕಲ್ಲು ತೂರಿದ ಕಿಡಿಗೇಡಿಗಳು!
ಮಂಗಳೂರು: ಕರಾವಳಿಯಲ್ಲಿಂದು ಜಾತ್ಯತೀತ ಪಕ್ಷ ಹಾಗೂ ಸಂಘಟನೆಗಳಿಂದ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ. ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಜಾಥಾಕ್ಕೆ ಬೆಳಗ್ಗೆ 9 ಗಂಟೆಗೆ ಬಹುಭಾಷಾ ನಟ ಪ್ರಕಾಶ ರೈ ಚಾಲನೆ ನೀಡಲಿದ್ದಾರೆ.
ಬಂಟ್ವಾಳದ ಫರಂಗಿ ಪೇಟೆಯಿಂದ ಮಾಣಿವರೆಗೆ ಸುಮಾರು 25ಕಿ.ಮೀಟರ್ ಸಂಚರಿಸುವ ನಡಿಗೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಆದರೆ, ಸಾಮರಸ್ಯ ನಡಿಗೆ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಬೆಳ್ಳಂಬೆಳಗ್ಗೆಯೇ ಫರಂಗಿಪೇಟೆ ಬಳಿ ಎರಡು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಒಂದು ರಾಜಹಂಸ ಬಸ್ ಮತ್ತು ಕೆಎಸ್ ಆರ್ ಟಿಸಿ ಬಸ್ ಗ್ಲಾಸ್ ಗಳು ಜಖಂಗೊಂಡಿವೆ. ಸಾಮರಸ್ಯ ನಡಿಗೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆನ್ನಲಾಗಿದೆ.