ಪ್ರಮುಖ ಸುದ್ದಿ
ವಕೀಲರ ಪರಿಷತ್ ಚುನಾವಣೆಃ ಶಹಾಪುರ-ಶೇ.99 ರಷ್ಟು ಮತದಾನ
ಯಾದಗಿರಿಃ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಅಂಗವಾಗಿ ರಾಜ್ಯಾದ್ಯಂತ ಮಂಗಳವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕಿನಲ್ಲಿ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಮತದಾನ ವ್ಯವಸ್ಥೆ ಮಾಡಲಾಗಿತ್ತು. ಆಯ ತಾಲೂಕು ವಕೀಲರು ತಮ್ಮ ತಮ್ಮ ಮತಕೇಂದ್ರಗಳಲ್ಲಿ ಮತದಾನ ಮಾಡಿದರು.
ಶಹಾಪುರದಲ್ಲಿ ಒಟ್ಟು 115 ಮತಗಳಿದ್ದು, ಶೇ.99 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಸಾಲೋಮನ್ ಆಲ್ಫ್ರೆಡ್ ತಿಳಿಸಿದರು.
ಉಳಿದಂತೆ ಜಿಲ್ಲಾದ್ಯಂತ ಬಹುತೇಕ ಶಾಂತಿಯುತ ಮತದಾನ ಜರುಗಿತು. ರಾಜ್ಯ ಪರಿಷತ್ ಚುನಾವಣೆಗೆ ನೂರಾರು ಜನ ಸ್ಪರ್ಧಿಸಿರುವದರಿಂದ ಬ್ಯಾಲೇಟ್ ಪೇಪರ್ ಸುದ್ದಿ ಪತ್ರಿಕೆ ಇದ್ದಂತೆ ದೊಡ್ಡದಿತ್ತು.
ಹೀಗಾಗಿ ವಕೀಲರು ಮತ ಹಾಕಲು ಬ್ಯಾಲೇಟ್ ನಲ್ಲಿ ನಂಬರ ಹೆಸರು ಹುಡುಕಾಡಿದ ಮತ ಹಾಕುವಂತಾಯಿತು.