ಪ್ರಮುಖ ಸುದ್ದಿ
ಕೊಪ್ಪಳ : ಐವರು ವಿದ್ಯಾರ್ಥಿಗಳ ಸಾವು, ಹಾಸ್ಟಲ್ ವಾರ್ಡನ್ ಬಂಧನ!
ಕೊಪ್ಪಳ: ಧ್ವಜಸ್ಥಂಬ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಸಾವಿಗೀಡಾದ ದುರ್ಘಟನೆ ನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಹಾಸ್ಟಲ್ ವಾರ್ಡನ್ ಬಸವರಾಜ್ ಧ್ವಜಸ್ಥಂಬ ತೆರವುಗೊಳಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವ ಮೂಲಕ ಬೇಜವಬ್ದಾರಿತನ ತೋರಿದ್ದಾರೆನ್ನಲಾಗಿದೆ. ಕೊಪ್ಪಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಾರ್ಡನ್ ಬಸವರಾಜ್ ನನ್ನು ವಶಕ್ಕೆ ಪಡೆದಿದ್ದಾರೆ.