ಪ್ರಮುಖ ಸುದ್ದಿ
ಕೋಟೆನಾಡಿನ ವೇದಾವತಿ ನದಿಗೂ ಬಂತು ನೀರು!
ಚಿತ್ರದುರ್ಗ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು ಜಿಲ್ಲೆಯ ಜಲಮೂಲಗಳು ಭರ್ತಿ ಆಗಿದ್ದು ವೇದಾವತಿ ನದಿಗೆ ನೀರಿನ ಹರಿವು ಹೆಚ್ಚಿದೆ. ಕಡೂರು, ಬೀರೂರು, ಯಗಟಿ ಮೂಲಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರಕ್ಕೆ ನೀರು ಬಂದಿದ್ದು ನಿನ್ನೆ ಸಂಜೆಯಿಂದ ವೇದಾವತಿ ನದಿ ನೀರು ಹರಿವು ಹೆಚ್ಚಾಗಿದ್ದು ಇಂದು ಹೊಸದುರ್ಗ ಪಟ್ಟಣ ಬಳಿಯ ಕೆಲ್ಲೋಡು ಸೇತುವೆ ಭರ್ತಿ ಆಗಿದೆ. ಅಂತೆಯೇ ಕಳೆದ ಒಂದು ವಾರದಿಂದ ಹೊಸದುರ್ಗದಲ್ಲೂ ಮಳೆ ಪ್ರಮಾಣ ಹೆಚ್ಚಿದ್ದು ಬರಿದಾಗಿದ್ದ ವೇದಾವತಿ ನದಿಗೆ ನೀರು ಬಂದಿದೆ. ಕೆಲ್ಲೋಡು ಸೇತುವೆ ಓವರ್ ಫ್ಲೋ ಆಗಿ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದತ್ತ ನೀರು ಹರಿಯುತ್ತಿದ್ದು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವ ಜಲಾಶಯಕ್ಕೆ ಜೀವ ತುಂಬಲಿ ಎಂದು ದುರ್ಗದ ಜನ ಪ್ರಾರ್ಥಿಸುತ್ತಿದ್ದಾರೆ . ಸದ್ಯ ವೇದಾವತಿಗೆ ನೀರು ಬಂದಿದ್ದು ನಿರಂತರ ಬರದಿಂದ ಕಂಗಾಲಾಗಿದ್ದ ಬರದನಾಡು ಚಿತ್ರದುರ್ಗ ಜಿಲ್ಲೆಯ ಜನ ನೀರು ಕಂಡು ಹ್ಯಾಪಿ ಆಗಿದ್ದಾರೆ.