ಪ್ರಮುಖ ಸುದ್ದಿ
ಕಾಲುವೆ ನೀರಿಗಾಗಿ ಜಗಳಃ ಕಲ್ಲಿನಿಂದ ಜಜ್ಜಿ ಓರ್ವ ವ್ಯಕ್ತಿಯ ಕೊಲೆ
ಕಾಲುವೆ ನೀರಿಗಾಗಿ ಸಂಬಂಧಿಕರ ನಡುವೆ ಜಗಳಃ ಓರ್ವ ಹತ್ಯೆ
ಯಾದಗಿರಿಃ ಜಮೀನಿಗೆ ಕಾಲುವೆ ಮೂಲಕ ನೀರು ಬಿಡುವ ವೇಳೆ ಸಂಬಂಧಿಕರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂಬಂಧಿಕರ ನಡುವೆ ನಡೆದ ಜಗಳದಲ್ಲಿ ತಿರುಪತಿ (28) ಎಂಬಾತನಿಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆಕೈಗೊಂಡಿದ್ದಾರೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ