ಪ್ರಮುಖ ಸುದ್ದಿ
ಕಲುಷಿತ ನೀರು ಸೇವನೆ ಹಿನ್ನೆಲೆ ಐವತ್ತು ಜನ ಅಸ್ವಸ್ಥ!
ಕಲಬುರಗಿ : ಕಲುಷಿತ ನೀರು ಸೇವಿಸಿದ ಪರಿಣಾಮ 50 ಜನ ಅಸ್ವಸ್ಥಗೊಂಡಿರುವ ಘಟನೆ ಜೇವರಗಿ ತಾಲೂಕಿನ ಗುಡೂರು ಗ್ರಾಮ ಬಳಿಯ ತಾಂಡಾದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಒಂದು ವಾರದಿಂದ ಮಳೆಯಾದ ಪರಿಣಾಮ ಕಲುಷಿತ ನೀರು ಸರಬರಾಜಾಗಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಅಸ್ವಸ್ಥರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಆರೋಗ್ಯ ಇಲಾಖೆ ಮೂಲದಿಂದ ತಿಳಿದು ಬಂದಿದೆ.