Homeಅಂಕಣಪ್ರಮುಖ ಸುದ್ದಿಯೂತ್ ಐಕಾನ್ವಿನಯ ವಿಶೇಷ
ಸರ್ಕಾರದ ಉಚಿತ ರೀಚಾರ್ಜ್ ಯೋಜನೆ ಕುರಿತ ವಾಟ್ಸಾಪ್ ಸಂದೇಶ ನಿಮಗೂ ಬಂತಾ; ಎಚ್ಚರವಾಗಿರಿ
ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ, ಫೇಕ್ ಸಂದೇಶ ವಾಟ್ಸಾಪ್‌ನಲ್ಲಿ ಓಡಾಡುತ್ತಿದೆ. ಮೂರು ತಿಂಗಳ ಉಚಿತ ರೀಚಾರ್ಜ್ ಎಂಬ ಸಂದೇಶ ಫಾರ್ವರ್ಡ್ ಆಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ.
ವಾಟ್ಸಾಪ್ ಮೂಲಕ ನಿತ್ಯ ಹಲವಾರು ಫಾರ್ವರ್ಡ್ ಸಂದೇಶಗಳು ನಿಮಗೂ ಬರಬಹುದು. ಇವುಗಳಲ್ಲಿ ಹೆಚ್ಚಿನ ಎಲ್ಲಾ ಸಂದೇಶಗಳು ಸುಳ್ಳಾಗಿರುತ್ತವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಉಚಿತ ರೀಚಾರ್ಜ್ ಆಫರ್ ನೀಡುತ್ತಿದೆ ಎಂಬ ಸಂದೇಶವೊಂದು ಇತ್ತೀಚೆಗೆ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನಂಬಿದ ಹಲವಾರು ಬಳಕೆದಾರರು, ಅದನ್ನು ವಾಟ್ಸಾಪ್ ಮೂಲಕ ಹಲವರಿಗೆ ಫಾರ್ವರ್ಡ್ ಮಾಡಿದ್ದಾರೆ. ಆದರೆ, ಇದು ಅಸಲ್ಲಿಯಲ್ಲ ನಕಲಿ ಎಂಬುದಾಗಿ ಪಿಐಬಿ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ಅಲ್ಲದೆ ಕೇಂದ್ರ ಸರ್ಕಾರವು ಇಂಥಾ ಯಾವುದೇ ಉಚಿತ ರೀಚಾರ್ಜ್ ಯೋಜನೆ ಘೋಷಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.