ಪ್ರಮುಖ ಸುದ್ದಿ
ವರುಣಾ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಾರು ಅಪಘಾತ!
ಬಾಗಲಕೋಟೆ : ಬದಾಮಿ ತಾಲೂಕಿನ ಬಡಕುರ್ಕಿ ಗ್ರಾಮದ ಸಮೀಪ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಿಎಂ ಸಿದ್ಧರಾಮಯ್ಯ ಪುತ್ರ ಡಾ.ಯತೀಂದ್ರ ಸಂಚರಿಸುತ್ತಿದ್ದ ಕಾರು ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಈರಣ್ಣ ಪಟ್ಟಣಶೆಟ್ಟಿ ಗಾಯಗೊಂಡಿದ್ದು ಬಾಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಡಾ.ಯತೀಂದ್ರ ಅವರು ಸಿದ್ಧರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಜನರ ಸಮಸ್ಯೆ ಆಲಿಸಿದರು. ಈ ವೇಳೆ ಜೋಗನ್ ಎಂಬುವರ ಕಾರಿನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಆದರೆ, ಕಾರಲ್ಲಿದ್ದ ಯತೀಂದ್ರ ಮತ್ತಿತರರು ಸೇಫ್ ಆಗಿದ್ದಾರೆ ಎಂದು ತಿಳಿದು ಬಂದಿದೆ.