ಪ್ರಮುಖ ಸುದ್ದಿ
ಗುಂಡಿಟ್ಟು ಹೆಂಡತಿಯನ್ನು ಹತ್ಯೆ ಮಾಡಿ ಕೋವಿಯೊಂದಿಗೆ ಪೊಲೀಸ್ ಠಾಣೆಗೆ ಬಂದ ಗಂಡ..!
ಕೊಡಗು: ಗಂಡ ಹೆಂಡತಿ ನಡುವೆ ನಡೆದ ಗಲಾಟೆ ವೇಳೆ ಗಂಡ ಹೆಂಡತಿಯನ್ನೇ ಹತ್ಯೆ ಮಾಡಿರೋ ದಾರುಣ ಘಟನೆ ವಿರಾಜಪೇಟೆ ತಾಲೂಕಿನ ಬೋಟೋಳಿ ಗ್ರಾಮದಲ್ಲಿ ಈ ಭಯಾನಕ ಮರ್ಡರ್ ನಡೆದಿದೆ.
ಕೊಲೆಯಾದವರನ್ನು ಶಿಲ್ಪ ಸೀತಮ್ಮ (36) ಹತ್ಯೆಯಾದ ಮಹಿಳೆ. ಹೆಂಡತಿಯನ್ನು ಕೊಂದ ಬಳಿಕ ಪತಿ ನಾಯಕಂಡ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ. ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಪತಿ ಹತ್ಯೆ ಮಾಡಿದ್ದಾರೆಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯ ಗುಂಡಿಗೆ ಬಲಿಯಾಗಿರುವ ಶಿಲ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದರು. ಇಂದು ಬೆಳಗ್ಗೆ 9ಗಂಟೆಗೆ ಪತಿ ಬೋಪಣ್ಣ (45) ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.