ಅಂಕಣಪ್ರಮುಖ ಸುದ್ದಿ

ಸಕ್ಕರೆ ಖಾಯಿಲೆಗೆ ರಾಮಬಾಣವಂತೆ ಈ ವೈನ್!

ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನೆನಪಿರಲಿ

ರಾಜಸ್ಥಾನದ ಮರಳುಗಾಡಿನಲ್ಲಿ ಬೆಳೆದ ಆಲಿವ್ ಎಂಬ ಗಿಡದ ಎಲೆಗಳಿಂದ ತಯಾರಿಸಿದ ವೈನ್ ಒಂದು ಸಕ್ಕರೆ ಖಾಯಿಲೆ ಹಾಗೂ ಮಾರಣಾಂತಿಕ ಕ್ಯಾನ್ಸರ್ ಖಾಯಿಲೆಗೆ ರಾಮಬಾಣವಾಗಿದೆ ಎನ್ನಲಾಗುತ್ತಿದೆ. ಸದ್ಯ ರಾಜಸ್ಥಾನಿ ವೈನ್​ ಮಾರುಕಟ್ಟೆಗೆ ಪರಿಚಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿದು ಬಂದಿದೆ.

ಭಾರತದ ರಾಜಸ್ಥಾನ ರಾಜ್ಯ ಹೊರತು ಪಡಿಸಿದರೆ ಇಸ್ರೇಲ್​, ಇಟಲಿ ಮತ್ತು ಅರ್ಜೆಂಟೈನಾ ದೇಶಗಳಲ್ಲಿ ಆಲಿವ್ ಗಿಡ ಬೆಳೆಯುತ್ತದೆ. ಆದರೆ, ಈವರೆಗೆ ಬೇರೆ ದೇಶಗಳಲ್ಲಿ ಆಲಿವ್ ಗಿಡದ ಎಲೆಗಳನ್ನು ಬಳಸಿ ವೈನ್ ತಯಾರಿಸುವ ಚಿಂತನೆ ನಡೆದಿಲ್ಲ ಎಂದು ರಾಜಸ್ಥಾನ ಆಲಿವ್​ ಕಲ್ಟಿವೇಷನ್​ ಲಿ. ಮುಖ್ಯಸ್ಥ ಯೋಗೇಶ್​ ಕುಮಾರ್​ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜಸ್ಥಾನ ಆಲಿವ್​ ಕಲ್ಟಿವೇಷನ್​ ಲಿಮಿಟೆಡ್ ಈಗಾಗಲೇ ಪೇಟೆಂಟ್ ಗಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಫಿನೋಲೆಕ್ಸ್​ ಪಾಲ್ಸನ್​ ಇಂಡಸ್ಟ್ರೀಸ್ ಸಹಯೋಗದೊಂದಿಗೆ ಆಲಿವ್​ ವೈನ್ ಇಷ್ಟರಲ್ಲೇ ​ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ತಿಳಿದು ಬಂದಿದೆ. ಆದರೆ, ಆಲಿವ್ ವೈನ್ ಎಷ್ಟರ ಮಟ್ಟಿಗೆ ಚಿಕಿತ್ಸಕ ಶಕ್ತಿ ಹೊಂದಿದೆ ಅಥವಾ ಇದೊಂದು ಬ್ರ್ಯಾಂಡ್ ಪ್ರಚಾರ ತಂತ್ರವೇ ಎಂಬುದು ಮಾತ್ರ ಆಲಿವ್ ವೈನ್ ಮಾರುಕಟ್ಟೆಗೆ ಬಂದ ಬಳಿಕವಷ್ಟೇ ಖಾತ್ರಿ ಆಗಲಿದೆ.

Related Articles

Leave a Reply

Your email address will not be published. Required fields are marked *

Back to top button