Homeಅಂಕಣಜನಮನಮಹಿಳಾ ವಾಣಿ
ಹುರುಳಿಕಾಳು ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುರುಳಿ ಕಾಳಿನಲ್ಲಿ ಅಧಿಕ ಮಟ್ಟದ ಪ್ರೋಟೀನ್ ಮತ್ತು ಪೋಷಕಾಂಶಗಳಿದ್ದು, ಸುಸ್ತು ಮತ್ತು ಆಯಾಸವಿದ್ದರೆ ಅಂತಹವರು ಇದನ್ನು ಸೇವನೆ ಮಾಡಬಹುದಾಗಿದೆ.
ಇದನ್ನು ಅಸ್ಮರಿ ಛೇದಕ ಎಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ. ಕಿಡ್ನಿಯ ಕಲ್ಲನ್ನು ದೂರ ಮಾಡುವುದು. ಹುರುಳಿಕಾಳಿನಿಂದ ವಾತವು ದಿಕ್ಕಿನಲ್ಲೇ ಚಲಿಸಿ, ಇದು ಮಲಬದ್ದತೆ ಕಡಿಮೆ ಮಾಡುವುದು. ಇದು ಕಣ್ಣಿನ ದೃಷ್ಟಿಗೂ ಒಳ್ಳೆಯದು. ದೂರದೃಷ್ಟಿ, ಹತ್ತಿರದ ದೃಷ್ಟಿಯು ಸರಿಪಡಿಸಬಹುದು. ಇದರ ಜೊತೆಗೆ ನುಗ್ಗೆಕಾಯಿ ಸೊಪ್ಪು, ವಿಟಮಿನ್ ಎ ಇರುವ ಆಹಾರ ಸೇವನೆ ಮಾಡಿ.