ಬಂದ್ ಇಲ್ಲ ಬರಿ ಪ್ರತಿಭಟನೆ, ಮೆರವಣಿಗೆ, ಮನವಿ ಮಾತ್ರ
ಮರಾಠ ಅಭಿವೃದ್ಧಿ ನಿಗಮ ಕೈಬಿಡುವಂತೆ ಆಗ್ರಹಿಸಿ ಮನವಿ
ಶಹಾಪುರಃ ಮರಾಠ ಅಭಿವೃದ್ಧಿ ನಿಗಮ ಕೈಬಿಡುವಂತೆ ಆಗ್ರಹಿಸಿ ಶಣಿವಾರ ಕರೆ ನೀಡಿದ್ದ ರಾಜ್ಯ ಬಂದ್ ನಗರದಲ್ಲಿ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ವಾಹನ ಸಂಚಾರ, ಹೊಟೇಲ್, ಪೆಟ್ರೋಲ್ ಬಂಕ್ ವ್ಯಾಪಾರ ವಹಿವಾಟು ಸೇರಿದಂತೆ ಇತರೆ ಚಟುವಟಿಕೆಗಳು ಯಥಾಸ್ಥಿತಿ ಮುಂದುವರೆದಿತ್ತು.
ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಸಂಚಾರ ಸೇರಿದಂತೆ ಆಟೋ, ಕಾರ್ ಬೈಕಗಳ ಓಡಾಟವು ಎಂದಿನಂತೆ ಕಂಡು ಬಂದಿತ್ತು. ಬೆಳಗ್ಗೆ ವಿವಿಧ ಕನ್ನಡಪರ ಸಂಘಟನೆಗಳಿಂದ ಮರಾಠ ಅಭಿವೃದ್ಧಿ ನಿಗಮ ಕೈಬಿಡುವಂತೆ ಒತ್ತಾಯಿಸಿ ನಗರದ ಚರಬಸವೇಶ್ವರ ಕಮಾನ್‍ದಿಂದ ಬಸವೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ‘ಬಿ’ ಸರ್ಕಲ್‍ನಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು. ನಂತರ ಟೈರವೊಂದಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದವು. ನಂತರ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿ ಮರಾಠ ಅಭಿವೃದ್ಧಿ ನಿಗಮ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಕಲ್ಯಾಣ ಕರ್ನಾಟಕ ಸಂ,ಸಂಚಾಲಕ ದೇವು ಭೀ.ಗುಡಿ, ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ಬೋನೇರ, ಮಲ್ಲಿಕಾರ್ಜುನ ಕಟ್ಟಿಮನಿ, ಮೌನೇಶ ಸುರಪುರಕರ್, ಮಲ್ಲಿಕಾರ್ಜುನ ನಗನೂರ ಸೇರಿದಂತೆ ಇತರರು ಇದ್ದರು. ತಹಸೀಲ್ ಕಚೇರಿ ಎದುರು ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಇದೇ ವೇಳೆ ಧರಣಿ ಕೈಗೊಂಡು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.