ಕಸಾಪ ಸಮ್ಮೇಳನ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ
ಯಾದಗಿರಿ, ಶಹಾಪುರಃ ಡಿ.24 ರಂದು ಯಾದಗಿರಿಯಲ್ಲಿ ನಡೆಯುತ್ತಿರುವ 4 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಸಿದ್ರಾಮ ಹೊನ್ಕಲ್ ಅವರಿಗೆ ಜಿಲ್ಲಾ ಕಸಾಪವತಿಯಿಂದ ಅಧಿಕೃತ ಆಹ್ವಾನ ನೀಡಿದರು.
ನಗರದ ಹೊನ್ಕಲ್ ಅವರ ಕಾವ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಕಸಾಪ ಬಳಗ ಅಧಿಕೃತ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಸಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷರಾದ ಹೊನ್ಕಲ್ ಅವರು, ನಾಡಿನಾದ್ಯಂತ ತಮ್ಮ ಬರಹದ ಮೂಲಕ ಗುರುತಿಸಿಕೊಂಡಿದ್ದಾರೆ. ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ಅವರು ರಚಿಸಿದ ಕೃತಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆಗೊಂಡಿವೆ.
ಅವರು ಸೃಜನಶೀಲ ಬರಹಗಾರರಾಗಿದ್ದು, ಅವರಿಂದ ಯುವ ಪ್ರತಿಭೆಗಳು ಸಾಕಷ್ಟು ಕಲಿಯಬೇಕಿದೆ. ಜಿಲ್ಲೆಯ ಸಾಹಿತ್ಯ ವಲಯ ಶ್ರೀಮಂತಗೊಳ್ಳಲು ಹೊನ್ಕಲ್ ಅವರ ಬರಹ, ಕೃತಿ ಅವರ ಶ್ರಮವು ಅಡಗಿದೆ.
ಸಗರನಾಡಿನಲ್ಲಿ ಹಲವಾರು ಸಾಹಿತಿಗಳಿದ್ದು, ಯುವ ಸಮೂಹಕ್ಕೆ ಸಾಹಿತ್ಯ ವಲಯ ಬೆಳೆಯಲು ಉತ್ತಮ ಮಾರ್ಗದರ್ಶನ ಅಗತ್ಯವಿದೆ. ಆ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳ ಮಾರ್ಗದರ್ಶನ ನೀಡಲು ಹಲವು ಗೋಷ್ಠೀಗಳನ್ನು ಆಯೋಜಿಸಲಾಗಿದೆ.
ವಿಶೇಷ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳು ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಾರ್ಥಕತೆ ಪಡೆಯಬೇಕು. ಒಟ್ಟಾರೆ ಜಿಲ್ಲಾ ಸಮ್ಮೇಳನದ ಯಶಸ್ವಿಗೆ ಸರ್ವರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಗುರುಮಠಕಲ್ ಖಾಸಾ ಮಠದ ಶಾಂತಿವೀರ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ, ಡಾ.ಚಂದ್ರಶೇಖರ ಸುಬೇದಾರ, ಅಯ್ಯಣ್ಣ ಹುಂಡೇಕಾರ, ಪ್ರಕಾಶ ಅಂಗಡಿ, ಭೀಮರಾಯ ಲಿಂಗೇರಿ, ವಿಶ್ವರಾಧ್ಯ ಸತ್ಯಂಪೇಟೆ, ವಡಿಗೇರ ಕಸಾಪ ಅಧ್ಯಕ್ಷ ಡಾ.ಗಾಳೆಪ್ಪ ಪೂಜಾರಿ, ಸಣ್ಣ ನಿಂಗಣ್ಣ ನಾಯ್ಕೋಡಿ, ಬಸವರಾಜ ಸಿನ್ನೂರ, ರಾಘವೇಂದ್ರ ಹಾರಣಗೇರ ಸೇರಿದಂತೆ ಇತರರು ಇದ್ದರು.