ಸುಕೋ ಬ್ಯಾಂಕ್ ಯೋಜನೆ ಜನರಿಗೆ ಸಹಕಾರಿ- ಗುರು ಕಾಮಾ
ನೂತನ ಕ್ಯಾಲೆಂಡರ್ ಬಿಡುಗಡೆ
ಯಾದಗಿರಿ, ಶಹಾಪುರಃ ಸುಕೋ ಬ್ಯಾಂಕ್ ಈ ವರ್ಷದ ಕ್ಯಾಲೆಂಡರ್ ಅನ್ನು `ಸಣ್ಣ ವ್ಯಾಪಾರ, ದೊಡ್ಡ ಪ್ರಭಾವ ಹೊಂದಿರುವ, ಸ್ಥಳೀಯ ಸಣ್ಣ ವ್ಯಾಪಾರ ಉದ್ದಿಮೆಗಳನ್ನು ಗುರುತಿಸಿ ಕ್ಯಾಲೆಂಡರ್ ರೂಪದಲ್ಲಿ ಪ್ರಕಟಿಸಿ, ಬೆಂಬಲ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ ಎಂದು ಹೈದರಾಬಾದ್ ಕರ್ನಾಟಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗುರುಲಿಂಗಪ್ಪ ಎಸ್. ಕಾಮಾ ತಿಳಿಸಿದರು.
ನಗರದ ಸುಕೋಬ್ಯಾಂಕ್ ಕಚೇರಿಯಲ್ಲಿ ತನ್ನ ಬೆಳ್ಳಿ ಹಬ್ಬದ ಆಚರಣೆ ಹಿನ್ನಲೆಯಲ್ಲಿ ವಿಭಿನ್ನವಾಗಿ ರೂಪಿಸಿ ಪ್ರಕಟಿಸಿರುವ 2019ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸುಕೋ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಅಲ್ಲದೇ, ಸಮಾಜದಲ್ಲಿ ಕೃಷಿ, ಶಿಕ್ಷಣ, ನಿರ್ಮಾಣ ಮತ್ತು ಕೃಷಿ ತಂತ್ರಜ್ಞಾನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂಪಾಯಿ ನಗದು ಬಹುಮಾನದ `ಸುಕೃತ ಕೃಷಿ’ ಪ್ರಶಸ್ತಿ ಹಾಗೂ `ಸುಕೃತ ಕೃಷಿ’ ಲೇಖನ ಪ್ರೋತ್ಸಾಹ ಬಹುಮಾನ ನೀಡುವ ಮೂಲಕ ಕೃಷಿಕ್ಷೇತ್ರ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ ಎಂದರು.
ಸೌರ ವಿದ್ಯುತ್ ಶಕ್ತಿಯನ್ನು ಪ್ರತೀ ಮನೆಗೆ ತಲುಪಿಸಲು 25 ಕಿಲೋ ವ್ಯಾಟ್ ಸಾಮಥ್ರ್ಯದ ಮನೆ ಮೇಲ್ಛಾವಣಿಯ ಗ್ರೀನ್ ವಿದ್ಯುತ್ ಉತ್ಪಾದನೆಯ `ಸುಕೋ ಸೋಲಾರ್ ಶಕ್ತಿ’ ಯೋಜನೆಯು ರೂಪಿಸಿದೆ.
ಇದು ವಿದ್ಯುತ್ ಕಡಿತ, ವಿದ್ಯುತ್ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಸಂರಕ್ಷಿಸಲು ನೆರವಾಗಲಿದೆ. ಈ ಭಾಗದಲ್ಲಿ ಯಥೇಚ್ಛವಾಗಿ ಸಿಗುತ್ತಿರುವ ಸೌರ ವಿದ್ಯುತನ್ನು ಸದುಪಯೋಗಪಡಿಸಿಕೊಳ್ಳಲು `ಸುಕೋ ಸೋಲಾರ್ ಶಕ್ತಿ’ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಹಕರಾದ ಮಂಜುನಾಥ ರಾಚರೆಡ್ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮನಗೌಡ ಬಿರಾದಾರ, ವ್ಯವಸ್ಥಾಪಕ ಮಹಾಂತೇಶ, ಬ್ಯಾಂಕ್‍ನ ಸಿಬ್ಬಂದಿ ಇದ್ದರು. ಸಿಬ್ಬಂದಿ ಶೃತಿ ಸ್ವಾಗತಿಸಿದರು. ಶಶಿಕುಮಾರ ಯು.ಎಮ್. ನಿರೂಪಿಸಿದರು. ಶರಣ್‍ಕುಮಾರ ವಂದಿಸಿದರು. ಸಾರ್ವಜನಿಕರು ಗ್ರಾಹಕರು ಭಾಗವಹಿಸಿದ್ದರು.