ಅಂಕಣ

ಗೆಲುವಿನ ತಿಲಕ ಭೀಮಾಕೋರೆಗಾಂವ್‍ ಕದನ-ಚರಿತ್ರೆ ಸೃಷ್ಟಿಸಿದ ಸುದಿನ

ಗೆಲುವಿನ ತಿಲಕ ಭೀಮಾಕೋರೆಗಾಂವ್‍ ಕದನ

ಡಾ.ಹಣಮಂತ್ರಾಯ ಸಿ,ಕರಡ್ಡಿ.
ಈ ಯುದ್ಧದಇತಿಹಾಸವನ್ನು ಮುನ್ನೆಲೆಗೆತಂದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‍ರವರಿಗೆ ಸಲ್ಲುತ್ತದೆ. ಬ್ರಿಟನ್‍ನ ಸ್ಕೂಲ್‍ಆಫ್‍ಎಕನಾಮಿಕ್ಸ್‍ನಲ್ಲಿ ಬಾರ್-ಅಟ್-ಲಾ ವ್ಯಾಸಂಗ (ಕ್ರಿ.ಶ.1922) ಮಾಡುತ್ತಿರುವಾಗ ಸಂಶೋಧನೆಗೆ ಸಾಹಿತ್ಯ ಪರಾಮರ್ಶೆಯ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಆಳ್ವಿಕೆಯಲ್ಲಿನ ಪ್ರಮುಖ ಐತಿಹಾಸಿಕ ಘಟನಾವಳಿಗಳ ಕುರಿತು ಲಂಡನ್ ಮ್ಯೂಸಿಯಂ ಲೈಬ್ರರಿಯಲ್ಲಿನ ಮೂಲಧಾರಗಳನ್ನು ಅನ್ವೇಷಿಸುವ ಸನ್ನಿವೇಶದಲ್ಲಿ ಈ ಭೀಮಾಕೋರೆಗಾಂವ್‍ ಕದನದ ಬಗ್ಗೆ ಮಾಹಿತಿ ಪಡೆದು ಈ ಮಾಹಿತಿಯನ್ನು ಕೂಲಂಕುಶವಾಗಿ ಅಧ್ಯಯನಿಸಿ ನಂತರ ಭಾರತಕ್ಕೆ ಮರಳಿ ಯುದ್ದ ನಡೆದ ಸ್ಥಳವಾದ ಕೋರೆಂಗಾವ್‍ಗೆ ಭೇಟಿ ನೀಡಿ ಭವ್ಯ ವಿಜಯಸ್ತಂಭವನ್ನುವಿಕ್ಷಿಸಿ ಅಲ್ಲಿನ ಸ್ಮಾರಕಕ್ಕೆಶ್ರದ್ಧಾಂಜಲಿ ಸಲ್ಲಿಸಿ ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಿದ ನಂತರ ಕೊರೆಗಾಂವ್‍ ಕದನದ ಇತಿಹಾಸ ಹೊರಬರುತ್ತದೆ.

ದೊಡ್ಡ ಪ್ರಮಾಣದಲ್ಲಿರುವ ಶೋಷಿತರನ್ನು ಅಸ್ಪೃಶ್ಯತೆಯ ಕಾರಣವೊಡ್ಡಿ ದೂರ ಇಡುತ್ತ ಬರಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ಸಮುದಾಯಗಳಿಗೆ ಸಂಬಂಧಿಸಿದವರು ಎಲ್ಲರೀತಿಯ ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ಅನುಭವಿಸಿದ್ದವರಾಗಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಆದರೆ ಕೊನೆಯ ವರ್ಗವಾದ ಶೂದ್ರರು ಜಾತಿಯತೆಯ ಕಾರಣದಿಂದಾಗಿ ಸಾಮಾಜಿಕ ಸಮಾನತೆ, ಧಾರ್ಮಿಕ ಸಮಾನತೆ ಮತ್ತುಆರ್ಥಿಕ ಸಮಾನತೆಯಿಂದ ವಂಚಿತರಾಗಿದ್ದಾರೆ. ಇವೆಲ್ಲಕ್ಕಿಂತಇನ್ನೊಂದು ಜಾತಿ ಪಂಚಮರು ಅಂದರೆ ಅಸ್ಪøಶ್ಯರು ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ (ಕ್ರಿ.ಶ. ಸುಮಾರು 1800) ಅಸ್ಪøಶ್ಯರ ಪಾಡು ತುಂಬಾ ಕರಾಳವಾಗಿತ್ತು.

ಪೇಶ್ವೆಗಳ ದೌರ್ಜನ್ಯ, ದಬ್ಬಾಳಿಕೆಗಳಿಂದ ರೋಸಿಹೊಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯ ಯುವಕರು ಪೇಶ್ವೆಗಳ ವಿರುದ್ದ ಯುದ್ದ ಮಾಡಲು  ಕೋರಿಕೊಂಡರು. ತಮ್ಮಗಳ ಕಷ್ಟ ಅಪಮಾನಗಳ ಪರಿಹಾರಕ್ಕಾಗಿ ಒದಗಿಬರುವ ಸುವರ್ಣಾವಕಾಶಕ್ಕಾಗಿ ಕಾಯುತಿದ್ದರು.
ಪೇಶ್ವೆ ಎರಡನೇಯ ಬಾಲಾಜಿ ಬಾಜಿರಾಯನು ಯುದ್ಧದಲ್ಲಿ ಬ್ರಿಟಿಷರೊಂದಿಗೆ ಸೋತು ಪುಣೆಯ ಅರ್ಧ ಭಾಗವನ್ನು (ಕ್ರಿ.ಶ.1817ರ ಮೇ 13ರಲ್ಲಿ) ಬಿಟ್ಟುಕೊಟ್ಟನು. ಆಗ ಮಹಾರ್ ವೀರ ನಾಯಕ ಸಿದ್ಧನಾಕ ಪೇಶ್ವೆಗೆ ನಾವು ನೀವೂ ಈ ಭಾರತ ದೇಶದವರು, ಬ್ರಿಟಿಷರು ಪರಕೀಯರು, ನಾವಿಬ್ಬರೂ ಕೂಡಿ ಅವರನ್ನುಎದುರಿಸೋಣ. ಆದರೆ ಯುದ್ಧಗೆದ್ದ ಮೇಲೆ ನೀವು ನಮ್ಮನ್ನು ಅಸ್ಪೃಶ್ಯರಂತೆ ಕಾಣದೆ ನಮಗೂ ಸಮಾನತೆ ನೀಡಬೇಕು ಎಂದು ಮಾತನಾಡಿದರು.

ಪ್ರತ್ಯುತ್ತರವಾಗಿ ಎರಡನೇ ಬಾಜಿರಾಯನು, ‘ನೀವುಗಳು, ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ಮತ್ತು ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖ ಪಡಿಸಲಿಕ್ಕಾಗಿ’ ಎಂದು ನುಡಿದ ಪರಿಣಾಮವಾಗಿ ಗಾಯಗೊಂಡ ವ್ಯಾಘ್ರಗಳಾಂತದ ಮಹರ್ ಪಡೆಯು ಸೇಡು ತೀರಿಸಿಕೊಳ್ಳಲಿಕ್ಕಾಗಿ ಸಮಯಕಾಯ ತೊಡಗಿದ್ದರು ಎನ್ನಲಾಗುತ್ತದೆ. ಬಾಂಬೆ ರೆಜಮೆಂಟ್‍ನಲ್ಲಿ ಬ್ರಿಟಿಷ್‍ ಕ್ಯಾಪ್ಟನ್‍ ಎಸ್. ಎಸ್. ಸ್ಪಂಡನ್ ನೇತೃತ್ವದಲ್ಲಿ ಮಹಾರ್ ‘ಸಿದ್ದನಾಕ’ನ ನಾಯಕತ್ವದ 500 ಅಸ್ಪೃಶ್ಯ ಯೋಧರ ಪಡೆಯು ಮನಃಪೂರ್ವಕವಾಗಿ ಆಹ್ವಾನ ಸ್ವೀಕರಿಸಿದರು.

1817ರ ಡಿಸೆಂಬರ್ 31ನೇ ತಾರೀಖು ರಾತ್ರಿ ಶಿರೂರ್‍ನಿಂದ ಹೊರಡುತ್ತಾರೆ. ಯುದ್ದ ಭೂಮಿಯಲ್ಲಿ ಸಾವನ್ನಪ್ಪುತ್ತಾರೆ. ಬೃಹತ್ ಸಂಖ್ಯೆಯಲ್ಲಿದ್ದ ಅಸ್ಪೃಶ್ಯ ಯೋಧರಿಗಿಂತ 56 ಪಟ್ಟು ಹೆಚ್ಚು ಇದ್ದ ಪೇಶ್ವೆಗಳ ರಣಹೇಡಿ ಸೈನ್ಯ, ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡ ತೊಡಗಿದರು.

ಅಂತಿಮವಾಗಿ ಈ ಯುದ್ದದಲ್ಲಿ ಅಸ್ಪೃಶ್ಯ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ. ಈ ಯುದ್ದದಲ್ಲಿ ಅಸ್ಪೃಶ್ಯ ಯೋಧರ ಪಡೆಯ ನಾಯಕನಾಗಿದ್ದ “ಸಿದ್ದನಾಕ”ನು ಸಹ ವೀರಮರಣವನ್ನಪ್ಪುತ್ತಾನೆ. ಅಂದುರಾತ್ರಿ 10:00 ಗಂಟೆಗೆ ಸರಿಯಾಗಿ ಬ್ರಿಟಿಷರು ಯುದ್ದ ನಡೆದ ಆ ಸ್ಥಳದಲ್ಲಿ (ಪೇಶ್ವೆಗಳ ಸಾಮ್ರಾಜ್ಯದಲ್ಲಿ) ಬ್ರಿಟಿಷ್ ಬಾವುಟವನ್ನು ಹಾರಿಸುತ್ತಾನೆ.

ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪೃಶ್ಯ ಯೋಧರ ನೆನಪಿಗಾಗಿ ಬ್ರಿಟಿಷರು 1921 ರ ಮಾರ್ಚ್ 21ರಂದು ಯುದ್ದ ನಡೆದ ಸ್ಥಳದಲ್ಲಿ (ಕೋರೆಂಗಾವ್ ನಲ್ಲಿ) 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ, ಆ ಸ್ತಂಭದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದರು. ಆ ಭವ್ಯ ವಿಜಯ ಸ್ತಂಬಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟಿಷರು 22 ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆ ರಾಜ ಮರ್ಯಾದೆಯ ಶ್ರದ್ದಾಂಜಲಿ ಸಲ್ಲಿಸಿದರು.

ಈ ವಿಜಯ ಸ್ತಂಭದ ಮೇಲೆ ಬ್ರಿಟಿಷರು “One of the ProdestTruimphs of the British Army in the East”  ಎಂದು ಸಹ ಕೆತ್ತಿಸಿದರು. ಬ್ರಿಟಿಷ್ ಬೋರ್ಡ್‍ ಆಫ್‍ ಕಂಟ್ರೋಲ್‍ನ ಅಧ್ಯಕ್ಷ ಕ್ಯಾನಿಂಗ್ ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾ‘ಸಣ್ಣ ಸಂಖ್ಯೆಯ ಸೈನ್ಯವು ಒಂದು ಬಲಾಡ್ಯ ಸಂಖ್ಯೆಯ ಸೈನ್ಯವನ್ನು ಮಣ್ಣು ಮುಕ್ಕಿಸಿದ ಉದಾಹರಣೆ ಚಿಕ್ಕ ಸಂಖ್ಯೆ ಹೊಂದಿರುವ ಎಲ್ಲಾ ಸೈನಿಕ ಬೆಟಾಲಿಯನ್‍ಗಳಿಗೂ ಅನುಕರಣೀಯವಾಗಿದೆ’ ಎಂದು ಹೇಳಿದ್ದು ದಾಖಲೆ.

ಈ ಅಸ್ಪೃಶ್ಯ ಸಮುದಾಯದ ವಿಜಯೋತ್ಸವ ಆಚರಿಸುವುದನ್ನು ಮೇಲ್ವರ್ಗದವರು ಮತ್ತು ಹಿಂದು ಪುರೋಹಿತ ಶಾಹಿಗಳು ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿ ಪ್ರತಿವರ್ಷದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಕಿರಿಕಿರಿ ಮಾಡುವ ಮನಸ್ಥಿತಿಯನ್ನು ಕಾಣುತಿದ್ದೇವೆ. ಭೀಮಾಕೋರೆ ಗಾಂವ್‍ ಕದನದ ಚಾರಿತ್ರಿಕ ಘಟನೆಯನ್ನು ಸರ್ಕಾರವು ಶಾಲಾ ಪಠ್ಯಗಳ ಮೂಲಕ ತಿಳಿಸುವ ಕಾರ್ಯ ಮಾಡಬೇಕಿದೆ.

ಆಗ ಬದುಕುವ ಸವಲತ್ತುಗಳನ್ನು ಕೊಡದ ಒಂದು ವರ್ಗ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ, ಸಾಮ್ರಾಜ್ಯವನ್ನು ನೆಲಸಮ ಮಾಡಿದ ಇತಿಹಾಸವನ್ನು ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯವಾಗಲಿದೆ.  ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ನ್ಯಾಯವನ್ನುಅಳವಡಿಸಿಕೊಂಡ ಭಾರತ ಸಂವಿಧಾನದ ಆಶಯಗಳಿಗೆ ಮಂಕು ಬೂದಿಯನ್ನುಎರಚುತ್ತಾ ಮನುವಾದಿಗಳು ತಳ ಸಮುದಾಯದ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಮೀಸಲಾತಿ ಕ್ರಮವನ್ನು ಅವೈಜ್ಞಾನಿಕವಾಗಿ ಖಂಡಿಸುತ್ತಿದ್ದಾರೆ, ಜಾತಿ ಜಾತಿಗಳ ಮಧ್ಯೆ ಜಗಳ ಹುಟ್ಟಿಸಿ ಕುತಂತ್ರದಿಂದ ಮರಳಿ ಮನುವಿನ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಮತ್ತೊಂದು ಭೀಮಾ ಕೋರೆಗಾಂವ್‍ ಯುದ್ಧವೇ ನಡೆದರೆ ಅಚ್ಚರಿಪಡಬೇಕಿಲ್ಲ.

-ಲೇಖಕರ ಸಂಪರ್ಕ ವಿಳಾಸ ಹಾಗೂ ಮೊಬೈಲ್ ಸಂಖ್ಯೆ

 ಡಾ.ಹಣಮಂತ್ರಾಯ ಸಿ,ಕರಡ್ಡಿ. ಪಿಎಚ್,ಡಿ
 ಉಪನ್ಯಾಸಕರು, ಸಮಾಜಕಾರ್ಯಅಧ್ಯಯನ ವಿಭಾಗಜ್ಞಾನತುಂಗಾ ಸ್ನಾತಕೋತ್ತರಕೇಂದ್ರರಾಯಚೂರ
 ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ-9886108774.

 

 

Related Articles

Leave a Reply

Your email address will not be published. Required fields are marked *

Back to top button