ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಧ್ಯಕ್ಷಳಾಗಿಲ್ಲ – ತಾರಾ ಸ್ಪಷ್ಟನೆ
ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಧ್ಯಕ್ಷಳಾಗಿಲ್ಲ – ತಾರಾ ಸ್ಪಷ್ಟನೆ
ವಿವಿ ಡೆಸ್ಕ್ಃ ಜನೇವರಿ 1 ರಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ರಾಜ್ಯ ಸರ್ಕಾರ ಆದೇಶ ಪತ್ರ ಹೊರಡಿಸಿರುವ ಕುರಿತು ಎಲ್ಲಡೆ ಸುದ್ದಿ ಹಬ್ಬಿದೆ ಅದು ಕೆಲ ತಾಂತ್ರಿಕ ದೋಷದಿಂದ ಕೂಡಿರುವ ಕಾರಣ ನನ್ನನ್ನು ನೇಮಿಸಲಾಗಿದೆ ಎಂದು ಸಾಕಷ್ಟು ಜನರು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಭಿನಂದನೆ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ನಟಿ ತಾರಾ, ಯಾವುದೇ ಆಯೋಗದ ಅದ್ಯಕ್ಷೆಯಾಗಿಲ್ಲ ಎಂಬುದನ್ನು ನಸುನಗುತ್ತಲೇ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಲ ತಾಂತ್ರಿಕ ತೆಯಿಂದ ಆದೇಶ ಪತ್ರದಲ್ಲಿ ನಮೂದಾಗಿರಬಹುದು, ಅಥವಾ ಏನಾಗಿದೆ ಗೊತ್ತಿಲ್ಲ.
ಆದರೆ ಈಗಾಗಲೇ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರಾಗಿ ಒಬ್ಬರು ಕೆಲಸ ಮಾಡುತ್ತಿರುವಾಗ ಮತ್ತೊಬ್ಬರನ್ನು ನೇಮಿಸಿರುವದೂ ಊರ್ಜಿತವಾಗಲ್ಲ ಎಂದು ನನಗೆ ಮಾಹಿತಿ ಬಂದಿದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ನಮ್ಮ ಪಕ್ಷ ನಮ್ಮ ಪಕ್ಷದ ಹಿರಿಯ ನಾಯಕರು ಪಕ್ಷದಲ್ಲಿನ ನನ್ನ ಕೆಲಸ ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಿದ್ದಾರೆ ಎಂಬ ಭರವಸೆ, ಆಶಯ ನನಗಿದೆ.
ಆಗ ನಾನು ತಮ್ಮೆಲ್ಲರೊಂದಿಗೆ ಆ ಕುರಿತು ಸಂತಸವನ್ನು ಹಂಚಿಕೊಳ್ಳುವೆ ಎಂದು ಅವರು ತಿಳಿಸಿದ್ದಾರೆ.