ಸಚಿವ ಆರ್.ಅಶೋಕಗೆ ಕೊರೊನಾಂತಕ, ಕ್ವಾರಂಟೈನ್ ಆಗ್ತಾರ ಸಚಿವರು.?
ಸಚಿವ ಆರ್. ಅಶೋಕ ಕ್ವಾರಂಟೈನ್ .?
ವಿವಿ ಡೆಸ್ಕ್ಃ ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೊನಾ ಶಂಕೆ ಹಿನ್ನೆಲೆ ಸಚಿವ ಆರ್.ಅಶೋಕ ಮೊನ್ನೆಯಷ್ಟೆ ಇದೇ ಆಸ್ಪತ್ರೆಗೆ ಭೇಟಿ ನೀಡಿ ನಡೆಸಿದ್ದ ಸಭೆಯಲ್ಲಿ ಕೊರೊನಾ ಶಂಕಿತ ವೈದ್ಯರು ಭಾಗವಹಿಸಿದ್ದು, ಇಂದು ಆ ವೈದ್ಯರಲ್ಲಿ ಕೆಮ್ಮು, ಜ್ವರ ಬಂದಿರುವ ಹಿನ್ನೆಲೆ ಕೊರೊನಾ ಶಂಕಿತ ವ್ಯಕ್ತವಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಕೊರೊನಾ ಶಂಕಿತ ವೈದ್ಯರೊಂದಿಗೆ ಸಚಿವ ಅಶೋಕ ಸಭೆ ನಡೆಸಿರುವ ಕಾರಣ ಸ್ವಯಂಕೃತವಾಗಿ ಕ್ವಾರಂಟೈನ್ ಆಗಬೇಕು ಅಲ್ಲದೆ ಕೋವಿಡ್ ಟಿಸ್ಟಿಂಗ್ ಮಾಡಿಸಿಕೊಳ್ಳಬೇಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಈ ಕುರಿತು ಸದವತಹಃ ಸಚಿವ ಅಶೋಕ ಅವರೇ ಯಾವ ನಿರ್ಧಾರಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಹೋಂ ಕ್ವಾರಂಟೈನ್ ಆಗ್ತಾರ ಅಥವಾ ಟೆಸ್ಟಿಂಗ್ ಗೆ ಒಳಪಟ್ಟು ಕ್ವಾರಂಟೈನ್ ಆಗಿ ಟ್ರೀಟ್ ಮೆಂಟ್ ಪಡೆಯಲಿದ್ದಾರೆ ಎಂಬುದು ಇನ್ನೂ ಅ್ಪಷ್ಟತೆ ಇಲ್ಲ ಎನ್ನಲಾಗಿದೆ.
ಮೊನ್ನೆಯಷ್ಟೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ನಡೆಸಿದ್ದ ಸಚಿವ ಆರ್.ಅಶೋಕಗೆ ಇದೀಗ ಕೊರೊನಾ ಆತಂಕವಂತು ಶುರುವಾಗಿದೆ.