ಡಿಕೆಶಿ ಜಾಮೀನು ತಿರಸ್ಕೃತದಲ್ಲಿ ಸರ್ಕಾರದ ಪಾತ್ರವಿಲ್ಲ – ಸಂತೋಷ ಹೆಗ್ಡೆ
ಡಿಕೆಶಿ ಜಾಮೀನು ತಿರಸ್ಕೃತದಲ್ಲಿ ಸರ್ಕಾರದ ಪಾತ್ರವಿಲ್ಲ – ಸಂತೋಷ ಹೆಗಡೆ
ಗುಬ್ಬಿಃ ಡಿ.ಕೆ.ಶಿವಕುಮಾರ ಅವರ ಜಾಮೀನು ಅರ್ಜಿ ತಿರಸ್ಕಾರವಾಗಿರುವದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ರಾಜಕೀಯ ಉದ್ದೇಶ ಇದರಲ್ಲಿ ಅಡಗಿದೆ ಎಂಬುದು ತಪ್ಪು ಭಾವನೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮುರ್ತಿ ಎನ್.ಸಂತೋಷ ಹೆಗ್ಡೆ ತಿಳಿಸಿದರು.
ತಾಲುಕಿನ ಬೆಲವತ್ತ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ನಡೆದ ನೇತ್ರದಾನ, ನೇತ್ರ ಪರೀಕ್ಷೆ, ಕನ್ನಡಕ ವಿತರಣೆ, ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ಈಗಿನ ಸರ್ಕಾರ ಎತ್ತಿ ತೋರಿಸುವ ಕಾರ್ಯಮಾಡುತ್ತಿದೆ. ಇದು ಉತ್ತಮ ಬೆಳವಣಿಗೆ.
ಪ್ರಸ್ತುತ ಈಗಿನ ಸರ್ಕಾರ ಮಾಡುವ ತಪ್ಪುಗಳನ್ನು ಮುಂದೆ ಬರುವ ಸರ್ಕಾರಗಳು ಜನರಿಗೆ ತೋರಿಸುವ ಕೆಲಸವನ್ನು ಮಾಡುವ ಮಟ್ಟಿಗೆ ಬಂದಿವೆ. ಇದು ಖುಷಿಯ ವಿಚಾರವೆಂದರು.
ಗ್ರಾಮದಲ್ಲಿ ಪ್ರತಿಭಾವಂತರನ್ನು ಹಿರಿಯರನ್ನು ಗೌರವಿಸುವ ಕಾರ್ಯಮಾಡಿದ್ದಲ್ಲಿ, ಅದನ್ನೆ ಮುಂದಿನ ಪೀಳಿಗೆ ಮುಂದುವರೆಸೆಕೊಂಡು ಹೋಗಲಿದೆ ಎಂದರು.