ಪ್ರಮುಖ ಸುದ್ದಿ

ಅತೃಪ್ತ ಶಾಸಕರು ಇಂದು ನನಗೆ ಕಾಲ್ ಮಾಡಿದ್ದು ನಿಜ – ಸಿದ್ಧರಾಮಯ್ಯ

ಬೆಂಗಳೂರು : ಈಗಾಗಲೇ ಮೂವರು ಅತೃಪ್ತ  ಶಾಸಕರು ಅನರ್ಹ ಆಗಿದ್ದಾರೆ. ಭೀತಿಗೊಂಡ ಇಬ್ಬರು ಶಾಸಕರು ಇಂದು ಬೆಳಗ್ಗೆ ನನಗೆ ಕಾಲ್ ಮಾಡಿದ್ದು ನಿಜ. ಆದರೆ, ನಾನು ಅವರ ಕಾಲ್ ರಿಸೀವ್ ಮಾಡಿಲ್ಲ. ಈ ಬಗ್ಗೆ ಮಾಜಿ ಗೃಹ ಸಚಿವ ಎಂ.ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಅದು ನಿಜ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲೇ ಅತೃಪ್ತ ಶಾಸಕರು ನನ್ನ ಮಾತು ಕೇಳಿ ಮುಂಬೈನಿಂದ ಬಂದಿದ್ದರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಈಗ ಕಾಲ್ ಮಾಡಿದರೆ ನಾನೇಕೆ ಕರೆ ಸ್ವೀಕರಿಸಲಿ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button