ಪ್ರಮುಖ ಸುದ್ದಿ
ಸಿದ್ಧರಾಮಯ್ಯ ಮನದಲಿ ಹರಯದ ನೆನಪುಗಳ ಮೆರವಣಿಗೆ!
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೂರು ದಿನಗಳ ಕಾಲ ಸ್ವಕ್ಷೇತ್ರ ಬಾದಾಮಿಯಲ್ಲಿ ಉಳಿದಿಕೊಂಡಿದ್ದು ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆ ಸಂತ್ರಸ್ಥರಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಷೇತ್ರ ಸಂಚಾರ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹಳ್ಳಿ ಹೋಟೆಲ್ ಒಂದರಲ್ಲಿ ಹಳ್ಳಿ ಊಟದ ಸವಿ ಸವಿದಿದ್ದಾರೆ. ಅಲ್ಲದೆ ಹರಯದ ದಿನಗಳ ಹಳ್ಳಿ ನೆನಪುಗಳನ್ನು ಸ್ಮರಿಸಿದ್ದಾರೆ. ಅಂತೆಯೇ ಹಳ್ಳಿ ಹೋಟೆಲ್ ಊಟ ಚಿತ್ರಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು ‘ಹೋಟೆಲ್ ಊಟದ ರುಚಿ, ಹರಯದ ದಿನಗಳ ಹಳ್ಳಿ ನೆನಪುಗಳನ್ನು ಚಪ್ಪರಿಸುವಂತೆ ಮಾಡ್ತು’ ಎಂದಿದ್ದಾರೆ.