“ತಾಕತ್ತಿದ್ದರೆ ಹಂದಿ ತಿಂದು ಮಸೀದಿಗೆ ಹೋಗಲಿ ನೋಡೋಣ!”
ಸಿಎಂ ಸಿದ್ಧರಾಮಯ್ಯ ಮೀನು ತಿಂದು ಧರ್ಮಸ್ಥಳ ದ ಮಂಜುನಾಥ ದೇಗುಲಕ್ಕೆ ಹೋಗಿದ್ದು ವಿವಾದಕ್ಕೀಡಾಗಿದೆ. ಅಲ್ಲದೆ ಮಾಂಸ ಸೇವಿಸಿ ದೇವಸ್ಥಾನಕ್ಕೆ ಬರಬೇಡಿ ಅಂತ ದೇವರು ಹೇಳಿದ್ದಾರಾ? ಇಂಥದ್ದೆ ಆಹಾರ ತಿನ್ನಬೇಕು, ಇಂಥದ್ದೆ ಬಟ್ಟೆ ಧರಿಸಬೇಕು ಅಂತ ದೇವರು ಹೇಳಿದ್ದಾರಾ ಎಂದು ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳಿಗೆ ಪ್ರಶ್ನೆ ಹಾಕುವ ಮೂಲಕ ಹೊಸ ಪ್ರಶ್ನೆಯೊಂದನ್ನು ಹುಟ್ಟು ಹಾಕಿದ್ದಾರೆ.
ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ದೇವಸ್ಥಾನಕ್ಕೆ ಶುಚಿತ್ವದಿಂದ, ಶ್ರದ್ಧಾ, ಭಕ್ತಿಯಿಂದ ಹೋಗುವ ಸಂಪ್ರದಾಯವಾಗಿದ ಮೇಲೆ ನಮ್ಮ ಸಮಾಜ ಬಲವಾಗಿ ನಂಬಿಕೆ ಇಟ್ಟಿದೆ. ಆದರೆ, ಸಿಎಂ ಸಿದ್ಧರಾಮಯ್ಯನವರು ಮಾತ್ರ ಮಾಂಸಹಾರ ಸೇವಿಸಿ ದೇಗುಲಕ್ಕೆ ಹೋಗಿ ಅಪಚಾರವೆಸಗಿದ್ದಾರೆ. ಅಲ್ಲದೆ ಮಾಂಸಹಾರ ಸೇವಿಸಿ ದೇಗುಲಕ್ಕೆ ಹೋಗಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಸಿಎಂ ಸಿದ್ಧರಾಮಯ್ಯ ಹಂದಿ ಮಾಂಸ ಸೇವಿಸಿ ಮಸೀದಿ ಪ್ರವೇಶಿಲಿ ನೋಡೋಣ. ತಾಕತ್ತಿದ್ದರೆ ಮಸೀದಿಗೆ ಹೋಗಿ ಹಂದಿ ಸೇವಿಸಿರೋದಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.