ಪ್ರಮುಖ ಸುದ್ದಿ
ತಹಸೀಲ್ದಾರ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಭಾವಚಿತ್ರಕ್ಕೆ ಅಪಮಾನ!?
ಯಾದಗಿರಿ : ಗುರುಮಠಕಲ್ ಪಟ್ಟಣದಲ್ಲಿನ ತಹಸೀಲ್ದಾರ್ ಕಚೇರಿಯ ಕೊಠಡಿಯೊಂದರ ಮೂಲೆಯಲ್ಲಿ ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರ ಭಾವಚಿತ್ರ ಇರಿಸಲಾಗಿದೆ. ಕೊಠಡಿಯಲ್ಲಿ ಬ್ಯಾಟರಿ ಇರಿಸಲಾಗಿದ್ದು ಕಸದಿಂದ ತುಂಬಿದೆ. ಹೀಗಾಗಿ, ಕಸ ತುಂಬಿದ ಕೊಠಡಿಯ ಮೂಲೆಯಲ್ಲಿ ನೆಲದ ಮೇಲೆ ಮಾಜಿ ಪ್ರಧಾನಿಯ ಭಾವಚಿತ್ರವಿಟ್ಟು ಅಪಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಸತುಂಬಿದ ಕೊಠಡಿಯ ನೆಲದ ಮೇಲೆ ಇಂದಿರಾಗಾಧಿ ಭಾವಚಿತ್ರವಿರಿಸಿರುವ ವಿಡಿಯೋ ವೈರಲ್ ಆಗಿದೆ. ಮಾಜಿ ಪ್ರಧಾನಿಗೆ ಅಗೌರವ ತೋರಿದ್ದು ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ನಾಗರೀಕರ ಆಗ್ರಹವಾಗಿದೆ.