ಪ್ರಮುಖ ಸುದ್ದಿ
ಯಾದಗಿರಿ ಜಿಲ್ಲೆ ಲಾಕ್ ಡೌನ್.? – ಇಂದು ನಿರ್ಧಾರ ಪ್ರಕಟ ಸಾಧ್ಯತೆ.!
ಯಾದಗಿರಿ ಜಿಲ್ಲೆ ಲಾಕ್ ಡೌನ್ ಗೆ ಚಿಂತನೆ ಇಂದು ನಿರ್ಧಾರ ಪ್ರಕಟ ಸಾಧ್ಯತೆ.?
ಯಾದಗಿರಿಃ ಬೆಂಗಳೂರ ಸೇರಿದಂತೆ ಕಲಬುರ್ಗಿ ಜಿಲ್ಲೆ ಇಂದಿನಿಂದ ಒಂದು ವಾರ ಲಾಕ್ ಡೌನ್ ಘೋಷಿಸಿವೆ.
ಹಿಂದೆಯೇ ದಕ್ಷಿಣ ಕನ್ನಡ ಜಿಲ್ಲೆ ಜುಲೈ 16 ರಿಂದ ಲಾಕ್ ಡೌನ್ ಜಾರಿಯಾಗಲಿದೆ. ಧಾರವಾಡ ಜಿಲ್ಲೆ ಜುಲೈ 15 ರಿಂದ ಲಾಕ್ ಡೌನ್ ಜಾರಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಅದೇ ರೀತಿ ಉಡುಪಿ, ಬೀದರ, ಶಿವಮೊಗ್ಗ ಜಿಲ್ಲೆಗಳಲ್ಲೂ ಇಂದು ಲಾಕ್ ಡೌನ್ ಜಾರಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತಿದೆ. ಅದರಂತೆ ಇಂದು ಯಾದಗಿರಿ ಜಿಲ್ಲೆಯೂ ಲಾಕ್ ಡೌನ್ ಜಾರಿಗೊಳಿಸುವ ಚಿಂತನೆಯಲ್ಲಿದ್ದು, ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.