ವಿನಯವಾಣಿ ಜನದನಿಃ ಎಂಎಲ್‍ಎ ವೆಂಕಟರಡ್ಡಿ ಮುದ್ನಾಳ ಹೇಳಿದ್ದೇನು.?
MLA ಮುದ್ನಾಳ ಟಾಕಿಂಗ್ ವಿತ್ ವಿನಯವಾಣಿ
ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆಯಾಗಿದೆ. ಆದರೆ ಈ ಭಾಗದಲ್ಲಿ ಹಲವಾರು ಶೈಕ್ಷಣಿಕ ಸೌಲಭ್ಯಗಳ ಕೊರತೆ ನಡುವೆಯು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದಡಿ ಇಡುತಿದ್ದಾರೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಿಲ್ಲೆಯ ಮಕ್ಕಳು ಉತ್ತಮ ರ್ಯಾಂಕಿಂಗ್ ಪಡೆದಿದ್ದಾರೆ. ಆದರೆ ಮೆಡಿಕಲ್ ಸೀಟ್ ದೊರೆಯದೇ ಪಶ್ಚಾತಾಪ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ವೇಳೆ ಯಾದಗಿರಿಗೆ ನೀಡಬೇಕಿದ್ದ ಮೆಡಿಕಲ್ ಕಾಲೇಜನ್ನು ಈ ಜಿಲ್ಲೆಗೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಮೆಡಿಕಲ್ ಕಾಲೇಜನ್ನು ಬೇರಡೆ ಸಾಗಿಸುವ ಲೆಕ್ಕ ಹಾಕಿದಂತೆ ಕಾಣುತ್ತಿದೆ.
ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯವಿದ್ದು, ಇದರಿಂದ ಜಿಲ್ಲೆಯು ಆರ್ಥಿಕವಾಗಿ ವಿವಿಧ ವ್ಯವಹಾರಗಳು ಬೆಳೆಯಲು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ಭಾಗದ ಕನ್ನಡಪರ ಸಂಘ ಸಂಸ್ಥೆಗಳು ಸೇರಿದಂತೆ ಇತರರನ್ನು ಸೇರಿಸಿಕೊಂಡು ಸಿಎಂ ಬಳಿ ನಿಯೋಗ ಕರೆದೊಯ್ದು ಮನವರಿಕೆ ಮಾಡುತ್ತೇನೆ. ಇನ್ನೊಮ್ಮೆ ಪರಿಶೀಲಿಸಲು ಒತ್ತಾಯಿಸುತ್ತೇವೆ.
–ವೆಂಕಟರಡ್ಡಿ ಮುದ್ನಾಳ. ಶಾಸಕರು.ಯಾದಗಿರಿ.