ಪ್ರಮುಖ ಸುದ್ದಿ

ಯಾದಗಿರಿ-ಶೌಚಾಲಯ ರಹಿತ ಕುಟುಂಬಗಳಿಗೆ ಅರ್ಜಿ ಆಹ್ವಾನ

ಅರ್ಜಿ ಆಹ್ವಾನ - https://sbm.gov.in/sbm dbt/secure/loqin.aspx 

ಶೌಚಾಲಯ ರಹಿತ ಕುಟುಂಬಗಳಿಗೆ ಅರ್ಜಿ ಆಹ್ವಾನ

ಯಾದಗಿರಿ- ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಪ್ರದೇಶದ ಶೌಚಾಲಯ ರಹಿತ ಕುಟುಂಬಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮರೇಶ ಆರ್. ನಾಯ್ಕ್ ಅವರು ತಿಳಿಸಿದ್ದಾರೆ.

ಸ್ವಚ್ಛ ಭಾರತ ಮಿಷನ್ ಹಂತ-2 ರಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಹ ಶೌಚಾಲಯ ರಹಿತ ಕುಟುಂಬಗಳಿಂದ ಭಾರತ ಸರಕಾರದ ತಂತ್ರಾಂಶದಲ್ಲಿ ನೇರವಾಗಿ https://sbm.gov.in/sbm dbt/secure/loqin.aspx ಲಿಂಕ್ ಮೂಲಕ ಸಾರ್ವಜನಿಕರು ಅರ್ಜಿಸಲ್ಲಿಸಬಹುದಾಗಿದ್ದು, ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಿರುವ ಅರ್ಜಿಯ ಪ್ರತಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಸಲ್ಲಿಸಲು ಸಾರ್ವನಿಕರಲ್ಲಿ ವಿನಂತಿಸಲಾಗಿದೆ.

ಅರ್ಜಿಸಲ್ಲಿಸುವ ವಿಧಾನಗಳ ಮಾಹಿತಿಗಾಗಿ ಈ ಕೆಳಗಿನಂತೆ ಅನುಸರಿಸಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಭಾರತ ಸರಕಾರ, ಸ್ವಚ್ಛ ಭಾರತ ಮಿಷನ್ ಹಂತ-2, ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿಸಲ್ಲಿಸುವ ಪೋರ್ಟಲ್, ನಿಮ್ಮ ಮೊಬೈಲ್ ನಂಬರ್‍ಯಿಂದ ನೋಂದಣಿ ಮಾಡಿಕೊಳ್ಳಿ ಅರ್ಜಿಯಲ್ಲಿ ನಿಮ್ಮ ವಿವರವಾದ ಮಹಿತಿಯನ್ನು ಭರ್ತಿಮಾಡಿ ಅಥವಾ ವೆಬ್‍ಸೈಟ್ http://sbm.gov.in/sbmphase2/homenew.aspx  ಲಿಂಕ್‍ನಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಷಯಕ್ಕೆ ಸಂಬಂಧಿಸಿದ ಕುಂದು ಕೊರತೆಗಳಿಗಾಗಿ ಪರಿಹಾರ ಸಹಾಯವಾಣಿ ಸಂ.9480985555ಗೆ ಸಂಪರ್ಕಿಸಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button