ಪ್ರಮುಖ ಸುದ್ದಿ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ – ಮಾಜಿ ಸಚಿವ ಎನ್.ಮಹೇಶ

ಶ್ರೀರಕ್ಷಾ ವಿದ್ಯಾಮಂದಿರದ ವಾರ್ಷಿಕೋತ್ಸವ

ಶ್ರೀರಕ್ಷಾ ವಿದ್ಯಾಮಂದಿರದ ವಾರ್ಷಿಕೋತ್ಸವ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ – ಮಾಜಿ ಸಚಿವ ಎನ್.ಮಹೇಶ

ಯಾದಗಿರಿ-ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಖಂಡಿತ ಫಲ ಕೊಡುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಮುಖಂಡ ಎನ್.ಮಹೇಶ ಅವರು ತಿಳಿಸಿದರು.ಇಲ್ಲಿನ ಮಾತಾ ಮಾಣಿಕೇಶ್ವರಿ ನಗರದಲ್ಲಿ ಸೋಮವಾರ ಸಂಜೆ ಶ್ರೀರಕ್ಷಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮನುಷ್ಯನ ಮೂಲಭೂತ ಹಕ್ಕಾಗಿದೆ. ಪ್ರತಿಯೊಂದು ಮಗು ಸಹ ಅಕ್ಷರದಿಂದ ವಂಚಿತರಾಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಾಗಿದೆ ಎಂದರು. ಜಾಗತಿಕರಣದ ಇಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ ವ್ಯಾಪಾರೀಕರಣವಾಗುತ್ತಿದೆ. ಇದು ಉತ್ತಮಬೆಳವಣಿಗೆಯಲ್ಲ. ಶಿಕ್ಷಣ ಸಂಸ್ಥೆಗಳು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಅಹಿಂದ ಹಿರಿಯ ಮುಖಂಡ ಮೌಲಾಲಿ ಅನುಪುರ ಮಾತನಾಡಿ, ನಮ್ಮ ಭಾಗ ಶೈಕ್ಷಣಿಕ ಹಿಂದುಳಿದ ಹಣೆಪಟ್ಟಿ ಕಳಚಿಕೊಳ್ಳಬೇಕಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ ಮಾತನಾಡಿ, ನಮ್ಮ ಬದುಕಿನಲ್ಲಿ ಎಲ್ಲಕ್ಕಿಂತ ನಾವು ಸಂಪಾದಿಸುವ ಜ್ಞಾನ ಅತಿ ಮುಖ್ಯವಾದ್ದು, ಜ್ಞಾನ ಯಾರೂ ಕಸಿಯದಂತಹ ಶ್ರೇಷ್ಠ ಆಸ್ತಿಯಾಗಿದೆ. ಶಿಕ್ಷಕರು ಮಕ್ಕಳಲ್ಲಿ ವಿಷಯ ಭೋದನೆ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನು ಹೇಳಿಕೊಡಬೇಕೆಂದು ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಡಾ.ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶುಲ್ಕ ವಿಧಿಸಲಾಗಿದೆ. ಕಾರಣ ನಾನು ಶಿಕ್ಷಣದ ವ್ಯಾಪಾರಿಯಲ್ಲ.ಈ ಕ್ಷೇತ್ರದಲ್ಲಿ ಏನಾದರು ಸಾಧನೆ ಮಾಡಿ, ಸಮಾಜಕ್ಕೆ ಉತ್ತಮವಾದ ಸಂದೇಶ ಕೊಡಬೇಲು ಎಂಬ ಕಾರಣದಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮಹಲರೋಜಾ  ಮಲ್ಲಿಕಾರ್ಜುನ ಮುತ್ಯಾ ವಹಿಸಿದ್ದರು. ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಪಾಟೀಲ್ ಕೌಳೂರು, ಮರೆಪ್ಪ ಚೆಟ್ಟೇರಕರ, ಹಣಮಂತ್ರಾವ್ ಕುಲಕರ್ಣಿ, ಮುಖ್ಯ ಗುರುಗಳಾದ ಶಶಿಕಲಾ ಕೃಷ್ಣಮೂರ್ತಿ, ಶಿಕ್ಷಕರಾದ ಗೌರಮ್ಮ ಮಗ್ಗ, ಕ್ರಿಸ್ಟಿನಾ, ಭಾವನ ಬಳಕೇರಿ, .ಸ್ವಾತಿ ಕುಲಕರ್ಣಿ, ಜ್ಯೋತಿ ಪಾಟೀಲ, ಮೈತ್ರಿ ಯೀ ನಂದಿನಿ, ರೂಪ ಪುಲಸೆ, ವಿಜಯಲಕ್ಷ್ಮಿ, ಮಹೇಶ್ ಕುಮಾರ್ ಶಿರವಾಳ, ಸಿಬ್ಬಂದಿಗಳಾದ ನಾಗಮ್ಮ ನಾಯಕ್ ಮಾಳಮ್ಮ ಪೂಜಾರಿ ಇದ್ದರು. ನಂತರ ಶಾಲಾ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಶ್ರೀರಕ್ಷಾ ಶಿಕ್ಷಣ ಸಂಸ್ಥೆಯಲ್ಲಿನ ಮಕ್ಕಳು ಸಂವಿಧಾನದ ಪೀಠಿಕೆಯನ್ನು ಉತ್ಸಾಹದಿಂದ ಹೇಳುವುದು ಕಂಡರೆ, ಖಂಡಿತಾ ಈ ಸಂಸ್ಥೆ ಭವಿಷ್ಯದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಲಿದೆ.

-ಎನ್.ಮಹೇಶ ಮಾಜಿ ಶಿಕ್ಷಣ ಸಚಿವ

Related Articles

Leave a Reply

Your email address will not be published. Required fields are marked *

Back to top button