ಶಾಸಕ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಯಾರು ಗೊತ್ತೆ.?
ಸೇಠ್ ಮೇಲೆ ಹಲ್ಲೆಗೆ ಸಿದ್ರಾಮಯ್ಯನವರೇ ಪರೋಕ್ಷ ಬೆಂಬಲ – ಯಡಿಯೂರಪ್ಪ ಆರೋಪ
ಬೆಂಗಳೂರಃ ಗುಂಡಾಗಿರಿ ಮಾಡುವ ಪಿಎಫ್ಐ ಮೇಲಿರುವ ಹಲವು ಪ್ರಕರಣಗಳನ್ನು ಸಿದ್ರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ಐ ಮೇಲಿದ್ದ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು ಆದರೆ, ಇಂದು ತಮ್ಮದೇ ಪಕ್ಷದ ಶಾಸಕ ತನ್ವೀರ್ ಸೇಠ್ ಮೇಲೆ ಅದೇ ಪಿಎಫ್ಐ ಸಂಘಟನೆಯ ಕಾರ್ಯಕರ್ತ ಮಾರಾಣಾಂತಿಕ ಹಲ್ಲೆ ನಡೆದಿರುವದಕ್ಕೆ ಸಿದ್ರಾಮಯ್ಯನವರ ಪ್ರತ್ಯುತ್ತರವೇನು ಎಂದು ಸಿಎಂ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ, ಮೈಸೂರ ಸೇರಿದಂತೆ ಹಲವಡೆ ಪಿಎಫ್ ಐ ಸಂಘಟನೆ ಕಾರ್ಯಕರ್ತರು ನಡೆಸಿದ ಗುಂಡಾಗಿರಿ ಪ್ರಕರಣಗಳು ಸೇರಿದಂತೆ ಒಂದು ಕೊಲೆ ಕೇಸ್ ಸಹ ಸಿದ್ರಾಮಯ್ಯ ಸರ್ಕಾರ ಹಿಂದೆ ಪಡೆದಿತ್ತು ಎಂದು ನೆನಪಿಸಿದರು.
ಅಲ್ಲದೆ ಇದೀಗ ಅದೇ ಸಂಘಟನೆಯ ಕಾರ್ಯಕರ್ತನೋರ್ವ ಶಾಸಕ ತನ್ವೀರ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಸಿದ್ರಾಮಯ್ಯನವರು ಪಿಎಫ್ಐ ಸಂಘಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ತನ್ವೀರ್ ಸೇಠ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ರಾಮಯ್ಯನವರು, ಸಿಎಂ ಯಡಿಯೂರಪ್ಪನವರ ವಿರುದ್ಧ ರಾಜ್ಯದಲ್ಲಿ ರಕ್ಷಣೆ ಎಂಬುದಿಲ್ಲ ಶಾಸಕರನ್ನೆ ಕೊಲೆ ಮಾಡುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಯಡಿಯೂರಪ್ಪ ನವರಿಗೆ ನೈತಿಕತೆ ಎಂಬುದಿಲ್ಲ ಎಂದು ಹರಿಹಾಯ್ದಿದ್ದರು.