ಸಿಎಂ ಆರೋಪ ಸತ್ಯಕ್ಕೆ ದೂರ ಸಾಬೀತಾದರೆ ರಾಜಕೀಯ ನಿವೃತ್ತಿ
ಸಿಎಂ ಆಡಿಯೋ ಆರೋಪ ಸತ್ಯಕ್ಕೆ ದೂರ- ಯಡಿಯೂರಪ್ಪ
ಫೇಕ್ ಆಡಿಯೋ ಮೂಲಕ ದೊಂಬರಾಟ ಆಡೋದು ನಿಲ್ಲಿಸಿ-BSY
ವಿಧಾನಸಭೆಃ ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಫೇಕ್ ಆಡಿಯೋ ಬಿಡುಗಡೆ ಮಾಡಿದ್ದಾರೆ.
ನಾನು ಯಾವ ಶಾಸಕರಿಗೆ ಆಮೀಷವೊಡ್ಡಿಲ್ಲ. ನಾನು ಆಮೀಷವೊಡ್ಡಿದ್ದೇನೆ ಎಂಬುದು ಸತ್ಯವಾದ್ರೆ ನಾನು ರಾಜಕೀಯದಿಂದ ನಿವೃತ್ತಿ ಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಅವರಿಗೆ ಸವಾಲೆಸೆದರು.
ಸ್ಪೀಕರ್ ಅವರ ಜೊತೆ ಡೀಲ್ ಮಾಡಿದ್ದೇನೆ ಎಂಬ ಆರೋಪಿಸುವ ಸಿಎಂ ಅವರು ಆ ಕುರಿತು ಸಾಬೀತು ಪಡಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರ ಮಗ ಶರಣಗೌಡ ಅವರಿಗೆ ನಿನ್ನೆ ದೇವದುರ್ಗ ಸಮೀಪ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ ಶಾಸಕ ನಾಗನಗೌಡರ ಮಗ ಶರಣಗೌಡ ಅವರಿಗೆ ಫೋನ್ ಮೂಲಕ ತಮ್ಮ ಪಕ್ಷ ಬಿಜೆಪಿಗೆ ಬನ್ನಿ ಜಿಲ್ಲಾ ಉಸ್ತುವಾರಿ ಸಚಿವ ಜೊತೆಗೆ 25 ಕೋಟಿ ದುಡ್ಡು ಕೊಡ್ತೀವಿ ಎಂದು ಆಮೀಷ ವೊಡ್ಡಿದ್ದಾರೆ ಎಂದು ಸಿಎಂ ಆರೋಪಿಸಿದ್ದರು.
ಈ ಕುರಿತು ಯಡಿಯೂರಪ್ಪನವರು ಮಾಧ್ಯಮಕ್ಕೆ ಸ್ಪಷ್ಟನೆ ನಿಡಿದ್ದಾರೆ.