
ಶಹಾಪುರಃ ನಾಳೆ ಸಂಜೆ ಯಕ್ಷಗಾನ ಕಾರ್ಯಕ್ರಮ
ಉಡುಪಿ ಹೊಟೇಲ್ ಮಾಲೀಕರ ಬಳಗ ಸಹಯೋಗ
ಶಹಾಪುರಃ ಪ್ರತಿ ವರ್ಷದಂತೆ ಈ ಬಾರಿಯು ನಗರದ ವೈಷ್ಣವಿ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಇಲ್ಲಿನ ಉಡುಪಿ ಹೊಟೇಲ್ ಮಾಲೀಕರ ಬಳಗ ಆಯೋಜನೆ ಮಾಡಿದೆ.
ನಾಳೆ ಅಂದರೆ ಜುಲೈ 2 ಬುಧವಾರದಂದು ಸಂಜೆ 6 ಗಂಟೆಗೆ ಹಾಲಾಡಿ ಕುಂದಾಪುರ ಶ್ರೀ ಮಹಾ ಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಆಸಕ್ತರು ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹಿಸಬೇಕೆಂದು ಉಡುಪಿ ಹೊಟೇಲ್ ಮಾಲೀಕರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.