ಈ ವ್ಯಕ್ತಿ ಕಂಡು ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ
ಪ್ಲೀಜ್ ಈ ವ್ಯಕ್ತಿ ಕಂಡು ಬಂದಲ್ಲಿ ಕಾಲ್ ಮಾಡಿ.!
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ನಿವಾಸಿಯಾದ ಯಮನಪ್ಪ ತಂದೆ ಶರಣಪ್ಪ (40) ಎಂಬಾತ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಈತನನ್ನು ದಿನಾಂಕ 02-11-2019 ರಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಸಂಬಂದಿಕರೊಬ್ಬರು ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದರು.
ಕಿದ್ವಾಯಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ನಂತರ, ಮರಳಿ ಯಾದಗಿರಿಗೆ ಟ್ರೇನ್ ಮೂಲಕ ವಾಪಸ್ ಬರುವಾಗ ಬೆಂಗಳೂರಿನ ನಗರ ರೈಲು ನಿಲ್ದಾಣದಲ್ಲಿ ಯಮನಪ್ಪ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವದಿಲ್ಲ.
ಈ ಕುರಿತು ನಗರ ರೈಲ್ವೇ ವೃತ್ತ ವಿಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಎಲ್ಲಾ ಪೊಲೀಸ್ ಠಾಣೆಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಕಳೆದ ಹದಿನೈದು ದಿನದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಎಲ್ಲೂ ಕಂಡು ಬಂದಿರುವದಿಲ್ಲ.
ಹೀಗಾಗಿ ಸಾರ್ವಜನಿಕರಿಗೆ ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಥವಾ ಇಲ್ಲಿ ತಿಳಿಸಲಾದ ಮೊಬೈಲ್ ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಬೇಕೆಂದು ಸಂಬಂಧಿಕರು ಕಳಕಳಿಯ ಮನವಿ ಮಾಡಿದ್ದಾರೆ.
ಗಮನಿಸಿಃ ಈ ಮೇಲೆ ತಿಳಿಸಿದ ವ್ಯಕ್ತಿಯ ಆರೋಗ್ಯ ಸರಿಯಿಲ್ಲದ ಕಾರಣ, ಕಿದ್ವಾಯಿ ಆಸ್ಪತ್ರೆಗೆ ಕಳೆದು ಎರಡು ವರ್ಷದಿಂದ ಚಿಕಿತ್ಸೆಗಾಗಿ ತಿರುಗುತ್ತಿದ್ದು, ಈ ಸಂದರ್ಭ ಆತ ಕಾಣೆಯಾಗಿದ್ದಾನೆ. ಆರೋಗ್ಯ ಸೀಮಿತ ಕಳೆದುಕೊಂಡಿರುವ ಕಾರಣ ದಯವಿಟ್ಟು ಮೇಲೆ ತೋರಿಸಲಾದ ಭಾವಚಿತ್ರದಲ್ಲಿರುವಂತೆ ವ್ಯಕ್ತಿ ನಿಮಗೆ ಸಂಶಯ ಬಂದರೂ ತಕ್ಷಣ ಕಾಲ್ ಮಾಡಿ, ಅಥವಾ ಒಂದು ಫೋಟೊ ತೆಗೆದು ಕೆಂಚಪ್ಪ ನಗನೂರ 9880872988 ನಂಬರಿಗೆ ವಾಟ್ಸ್ ಅಪ್ ಗೆ ಸೆಂಡ್ ಮಾಡಿ ಪ್ಲೀಜ್. ಸಂಬಂಧಿಕರ ಚಿಂತಾಕ್ರಾಂತರಾಗಿದ್ದಾರೆ. ಹೆಡತಿ, ಮಕ್ಕಳು ದುಖಃದಲ್ಲಿದ್ದು, ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕೆಂದು ವಿನಯವಾಣಿ ಯೂ ಓದುಗರಲ್ಲಿ ಮನವಿ ಮಾಡುತ್ತದೆ.
ಈತ ದುಂಡು ಮುಖ ಹೊಂದಿದ್ದು, ಕಪ್ಪು ಮೈಬಣ್ಣ, ಸುಮಾರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮತ್ತು ಬಿಳಿ ಕೂದಲು ಹೊಂದಿರುತ್ತಾನೆ. ನಾಸಿ ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣದ ಶರ್ಟ್ ಧಿರಿಸಿದ್ದು, ಕೆಂಪು ಟವೆಲ್ ಹಾಕಿದ್ದ ಕಾಣೆಯಾದ ವೇಳೆ ಈ ಮೇಲಿನ ತಿಳಿಸಿದ ಬಣ್ಣದ ಬಟ್ಟೆಗಳನ್ನು ಆತ ಧರಿಸಿದ್ದ. ನಿಮಗೆ ಕಂಡು ಬಂದಲ್ಲಿ ದಯವಿಟ್ಟು ಸಂಪರ್ಕಿಸಿ.