ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ವಿರುದ್ಧ ಗುಡುಗಿದ ರವಿ ಬೆಳಗೆರೆ ಪತ್ನಿ ಯಶೋಮತಿ!
ನಿನ್ನೆಯಷ್ಟೇ ಮೌನ ಮುರಿದು facebookನಲ್ಲಿ ರವಿ ಬೆಳಗೆರೆ ಪರ post ಮಾಡಿದ ಯಶೋಮತಿ ಇಂದು ತಮ್ಮ ಪೋಸ್ಟ್ ಗೆ ಪ್ರತಿಕ್ರಿಯಿಸಿದವರಿಗೆ ಕೃತಜ್ಞತೆ ಹೇಳಿ comment ಮಾಡಿ ಸುನೀಲ್ ಹೆಗ್ಗರವಳ್ಳಿ ವಿರುದ್ಧ ಗುಡುಗಿದ್ದಾರೆ. ಯಶೋಮತಿ ಕಮೆಂಟಿಸಿದ ಪೂರ್ಣಪಾಠ ಇಲ್ಲಿದೆ…
ಪ್ರತಿಕ್ರಿಯಿಸಿದ ಎಲ್ಲರಿಗೂ ಚಿರರುಣಿ… we all love ravi. ನಮ್ಮ ಹಿಮ ಇನ್ನೂ ಚಿಕ್ಕವನಾದ್ದರಿಂದ he loves more than us. He needs his complete love. ಎರಡು ದಿನದಿಂದ ಶಾಲೆಗೆ ಹೋಗಿಲ್ಲ. ಸ್ವಲ್ಪ disturb ಆದಂತೆ ಕಾಣ್ತಿದ್ದಾನೆ. But I am there for him. ಅವರೆಲ್ಲೋ ಜೋಯಿಡಾದಲ್ಲೋ, ಆಫೀಸಲ್ಲೋ, ಕರಿಶ್ಮಾ ಹಿಲ್ಸ್ ನಲ್ಲೋ ಇದ್ದಾರೆ ಅಂದ್ರೆ ನಮಗೂ ಒಂದು ರೀತಿಯ ಭರವಸೆ ಇರುತ್ತಿತ್ತು ಅವರು ಸುರಕ್ಷಿತವಾಗಿದ್ದಾರೆಂದು. ಊಟದ ಮುಂದೆ ಕುಳಿತರೆ ಕಣ್ತುಂಬಿ ಬರುತ್ತೆ. ಧುತ್ತನೆ ಒಂದು ಅನೂಹ್ಯ ಘಟನೆ ಎದುರಾದಾಗ ಆಘಾತ, ಆತಂಕ, ಕುತೂಹಲ, ದಿಗ್ಭ್ರಮೆಗಳು ಎಲ್ಲರ ಮನದಲ್ಲಿ ಮೂಡುವುದು ಸಹಜವೇ. ಅ ಸಮಯದಲ್ಲಿ ನೀಡುವ ಪ್ರತಿಕ್ರಿಯೆಗಳು ಇನ್ನಷ್ಟು ಗೊಂದಲಗಳನ್ನುಂಟು ಮಾಡುವಂತಾಗಬಾರದು ಅಷ್ಟೆ. ಮಾಧ್ಯಮದವರಿಗೆ ನನ್ನ ಮನವಿ. “ ನಾನು ಮನೆಬಿಟ್ಟು ಓಡಿಹೋಗಿದ್ದೇನೆ.” ‘’ಪೊಲೀಸರ ಮುಂದೆ ಸಿಟ್ಟಿನಿಂದ ವರ್ತಿಸಿದ್ದೇನೆ’’ ‘’ನನ್ನ ಹೇಳಿಕೆಯಿಂದಲೇ ರವಿಗೆ ಇಂದು ಈ ಗತಿ ಬಂದಿದೆ”’ ಎಂದೆಲ್ಲ ಇಲ್ಲಸಲ್ಲದ ಮಾತುಗಳನ್ನು ಪ್ರಸರಿಸಬೇಡಿ. ದೈಹಿಕವಾಗಿ ಅನಾರೋಗ್ಯಗೊಂಡಾಗ ಮಾನಸಿಕವಾಗಿಯೂ ಬಲಹೀನರಾಗುತ್ತಾರೆ. ಹೀಗಾಗಿ ನಮಗೆಲ್ಲ ರವಿಯ ಆರೋಗ್ಯದ ಬಗ್ಗೆಯೇ ಬಹಳವಾಗಿ ಆತಂಕವಾಗುತ್ತಿದೆ.
ಇನ್ನು ಸುನೀಲ್ ಹೆಗ್ಗರವಳ್ಳಿಯವರು ಹಾಯ್ ಬೆಂಗಳೂರ್ ಕಚೇರಿಯಲ್ಲಿ ಬಹಳ ಕಾಲದಿಂದ ಸಹೋದ್ಯೋಗಿಯಾಗಿ ದುಡಿದಿದ್ದರಿಂದ ಅದಕ್ಕಿಂತ ಹೆಚ್ಚಾಗಿ ಅವರು ಸದಾ ರವಿಯ ಒಳಿತನ್ನೇ ಬಯಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆನಷ್ಟೆ. ಅದರ ಹೊರತಾಗಿ ಮತ್ಯಾವ ಕಾರಣವೂ ಇಲ್ಲ. ಒಂದುವೇಳೆ ಅನುಮಾನಗೊಂಡು ಸುಪಾರಿ ಕೊಟ್ಟಿದ್ದರೆಂದೇ ಊಹಿಸಿಕೊಂಡಾಗ ನಾನೇನಾದರೂ ಸುನಿಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರುವಾದ ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ. ಇನ್ನೊಂದೆರಡು ಕೇಸುಗಳು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆಯನ್ನು ಕೇಳುತ್ತಲೂ ಇರಲಿಲ್ಲ. “ನಿಮ್ಮ ಕೈಯಲ್ಲೇ ಪ್ರಾಣ ಹೋಗುವುದಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೇನಿದೆ. ನೀವು ನನ್ನನ್ನು ತಂದೆಯಾಗಿ, ಗುರುವಾಗಿ ಸಲಹಿದ್ದೀರಿ ಎಂದು ಅವರ ಕೈಗೆ ಬಂದೂಕನ್ನ ನಾನೇ ಕೊಡುತ್ತಿದ್ದೆ.’’
ಇನ್ನು ರವಿ ದುಡಿದ ಹಣ, ಆಸ್ತಿ ಎಲ್ಲವೂ ಅವರ ಸ್ವಯಾರ್ಜಿತ. ಅದೆಲ್ಲದರ ಹಕ್ಕುದಾರರೂ ಅವರೇ. ನಾನವರನ್ನು ಪ್ರೀತಿಸಿದಾಗ ಅವರ ಮನೆ ಹಾಗೂ ಕಚೇರಿಗಳು ಬಾಡಿಗೆ ಕಟ್ಟಡಗಳಾಗಿದ್ದವು. ಅವರಿಂದ ನಾನು ಸದಾ ಬಯಸುವುದು ನಿಷ್ಕಲ್ಮಷ ಪ್ರೀತಿ ಹಾಗೂ ಅವರ ನಿರಂತರ ಸಮಾಜಮುಖೀ ಬರವಣಿಗೆ. ಹಿಮವಂತನಿಗೆ ಅಪ್ಪನ ಒಡನಾಟದ ಅಗತ್ಯವಿದೆ. ಆ ಮಗುವಿಗೆ ಅದರ ಸವಿ ಸದಾ ಸಿಗಲೆಂದು ನಿಮ್ಮೆಲ್ಲರ ಹಾರೈಕೆಯಿರಲಿ.
– ಯಶೋಮತಿ