ನಮ್ಮ ಬಾಲ್ಯದ ಟೀಚರ್ಸ್ಗೊಂದು ಸಲಾಂ
ಅಂಧಕಾರದಿಂದ ಬೆಳಕಿನಡೆಗೆ ಸುಶಿಕ್ಷಿತನಾಗಿಸುವ ಗುರು
ಇವತ್ತಿನ ದಿನ ನಮಗೆಲ್ಲ ತಿಳಿದೇ ಇದೇ ಗುರುಪೂರ್ಣಿಮೆ, ಪದ್ದತಿ, ಆಚಾರ, ಹಾಗೇ ಪೂಜಾ ವಿಧಿ ಅದಕ್ಕೂ ಮೀರಿ ಗುರು ಶಿಷ್ಯರ ಪ್ರೀತಿ, ಮರೆಯಲಾಗದ ನೆನಪುಗಳ ಬಗ್ಗೆ ಕಳೆದು ಹೋದ ಆ ದಿನವನ್ನು ಮತ್ತೆ ಆ ಕ್ಷಣಗಳನ್ನು ನಾವು ಹಂಚಿಕೊಳ್ಳೋಣ ಬನ್ನಿ.
ತಾಯಿ ಮೊದಲ ಗುರು, ನಮಗೆ ತಿಳಿದೇ ಇದೆ. ಆದರೆ ಬಾಲ್‌ವಾಡಿ ಅಂದರೆ ಅಂಗನವಾಡಿ, ನಾನು ಹೇಳಿಕ್ಕೆ ಹೊರಟಿರೋದು ಈಗಿನ ದಿನಮಾನದ ಬೇಬಿ ಸಿಟ್ಟಿಂಗ್ ಬಗ್ಗೆ ಅಲ್ಲ ಸುಮಾರು 20 ವರ್ಷದ ಹಿಂದಿನ ದಿನಗಳ ಬಗ್ಗೆ. ಆಗೆಲ್ಲ 5 ನೇ ವರ್ಷಕ್ಕೆ ಅಂಗನವಾಡಿಗೆ ನಮ್ಮ ತಂದೆ ತಾಯಿ ಹಾಕೋರು, ನಾವು ಬಿಡಿ ನಮ್ಮ ನಮ್ಮ ಮಿಸ್ ಗೆ ತೊಂದರೆ ಕೊಟ್ಟೆ ದೊಡ್ಡವರಾಗ್ ಬಿಟ್ಟಿ, ಮನೇಲಿ ಎಷ್ಟೇ ಊಟ, ತಿಂಡಿ ತರ ತರಹದ ತಿನಿಸು ಇರಲಿ ನಮಗೆ ಅದು ರುಚಿ ಹೆಚ್ಚಿಸಲ್ಲ, ಆದರೆ ಅಂಗನವಾಡಿ ಅಲ್ಲಿ ಕೊಡೋ ಪಾಯಸ , ಹಿಟ್ಟಿನ ಉಂಡೆ ಅದೆಲ್ಲ ನಮಗೆ ಪ್ರಿಯ, ನಮ್ಮ ತುಂಟಾಟಗಳಿಗೆ ಪೆಟ್ಟು ಕೊಟ್ಟು, ಗಲ್ಲಕ್ಕೆ ಮುತ್ತು ಕೊಟ್ಟು, ನಮ್ಮ ತುಂಟಾಟ, ಕಾಟನೆಲ್ಲ ಸಹಿಸಿಕೊಂಡು , ಬಿದ್ರೆ ನಮ್ಮ ಜೊತೆಗೆ ಅತ್ತು , ‘ಅ ..ಆ ಇಂದ ಎಬಿಸಿಡಿ, ಒಂದು ,ಎರಡು. ಮೂರರಿಂದ.. ನೂರ ತನಕ ಒಂದನೇ ತರಗತಿವರೆಗೆ ಬಂದ ಕೂಡಲೇ ಅಚ್ಚುಕಟ್ಟಾಗಿ ಕಲಿಸಿ ಪ್ರಾಥಮಿಕ ಶಾಲೆಗಳಲ್ಲಿ ಶಹಬ್ಬಾಸ್‌ಗಿರಿ ಪಡೆದಿದ್ದೇವೆ ಅಂದ್ರೆ ಅದಕ್ಕೆ ಕಾರಣ ಯಾರು ಅಲ್ಲಾ ನಮ್ಮ ಅಂಗನವಾಡಿ ಟೀಚರ್ ಅಂದ್ರೆ ತಪ್ಪಿಲ್ಲ.
ಇವತ್ತಿಗೂ ನಮಗೆ ಗುರು ಎಂದು ಒಂದಸಲ ಕಣ್ಣ ಮುಚ್ಚಿ ನೆನೆಸಿದರೆ ನೆನಪಾಗೋದು ನಮ್ಮ ಬಾಲ್ಯದ ಟೀಚರ್‌ಗಳು. ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆ ವರೆಗೂ ಎಷ್ಟೋ ಪೆಟ್ಟು, ಕೆಲವೊಮ್ಮೆ ಸಾಥ್ ಮಾತುಗಳು, ಇದು ತಪ್ಪು , ಇದು ಸರಿ ಎಂದು ಕಿವಿ ಹಿಂಡಿದಾಗ , ನಾವು ಕೂಡ ಗುರುಗಳ ಮೇಲೆ ಮುನಿಸಿಕೊಂಡು ಮುಖ ಹಿಂಡಿ ಬೈಯುವಾಗ ಅಂದರೆ ಮನಸಿನಲ್ಲಿ, ಕೊನೆಗೆ ಅನಸೋದು , ನನ್ನ ಗುರುಗಳು ಅವತ್ತು ಹೇಳಿದ್ದು ಸರಿ, ಇವತ್ತು ನಾವು ಇಲ್ಲಿ ಇದ್ದೇವೆ ಅಂದ್ರೆ ಆ ನನ್ನ ಗುರುಗಳ ಆ ಮಾರ್ಗದರ್ಶನವೇ ಕಾರಣ ಎಂದು ಅನಿಸಿದಾಗ ಅದೇ ಮುಖದಲ್ಲಿ ನಗು ಮೂಡಿಸುವ ಶಕ್ತಿ ಇದೆ ಎಂದರೆ ಅದು ನಮ್ಮ ಗುರುವಿಗೆ.
ಎಲ್ಲರ ಜೀವನದಲ್ಲಿ ಬಾಲ್ಯದ ನೆನಪುಗಳು ಇದ್ದೇ ಇರ‍್ತವೆ, ಇನ್ನು ಗುರುಗಳಿಗೆ ಕಣ್ಣು ತಪ್ಪಿಸಿ , ಲಾಸ್ಟ್ ಬೆಂಚ್ ನಲ್ಲಿ ಬೇಕು ಅಂತಲೇ ಕೂತು ಅಲ್ಲಿಂದ ಪರಾರಿಯಾದ ಎಷ್ಟೋ ಮಜವಾದ ಘಟನೆಗಳು, ಮತ್ತು ಕ್ರೀಡೆ, ಸಾಹಿತ್ಯ, ಮಿಮಿಕ್ರಿ, ಎಲ್ಲವನ್ನು ನಾವು ಮೊದಲು ಅನುಕರಣೆ ಮಾಡುವುದು ಗುರುಗಳದ್ದೇ ವಿನಹಃ ಯಾರನ್ನೂ ಅಲ್ಲ. ನಾವೆಷ್ಟೇ ದೊಡ್ಡವರಾಗಲಿ , ಎಷ್ಟೇ ಸಾಧನೆ ಮಾಡಿ ಕೊನೆಗೆ ಒಂದು ದಿನ ಗುರುಗಳು ಸಿಕ್ಕಿದರೂ ಕೂಡ ಒಂದು ನಮಸ್ಕಾರ, ಅದು ಬಿಡಿ, ಅವರನ್ನು ನೋಡಿ ಒಂದು ಚೆಂದದ ನಗು, ಕೊಡದೇ ನಾವೇ ದೊಡ್ಡವರು ಎಂಬ ಅಹಂಕಾರದಿ0ದ ನಮ್ಮ ವ್ಯಕ್ತಿತ್ವದ ಪ್ರದರ್ಶನವನ್ನು ನಾವು ಮಾಡುತ್ತಲೇ ಇರುತ್ತೇವೆ.
(ಅಂದರೆ ಆಯಾ ವ್ಯಕ್ತಿತ್ವಕ್ಕೆ ಅನುಗುಣವಾಗಿ) ಇಷ್ಟಾದರೂ ಕೂಡ ಗೆಲ್ಲುವುದು ಗುರುವೇ, ಯಾಕಂದರೆ ಇವತ್ತು ನಾವ ಒಂದು ಸ್ಥಾನದಲ್ಲಿ ಇದ್ದೇವೆ ಎಂದರೆ ಅದು ಗುರು ಕೊಟ್ಟ ಭಿಕ್ಷೆ ಎಂಬುದು ನಾವು ತಿಳಿದರಬೇಕು.
ಈ ಮಾತು ಇವತ್ತಿನ ಸಂದರ್ಭದಲ್ಲಿ ಅತ್ಯಂತ ಕಠಿಣ, ಶೋಚನೀಯ ಎನಿಸಿದರೂ ಕಾಲ ಕಳೆದಂತೆ, ಯಾರೋ ತಿಳಿದವರು ಹೇಳಿದ್ದರು, ಅಪ್‌ಡೇಟ್ ಆಗಬೇಕು , ಅಂದರೆ ಸಂಸ್ಕಾರ ಕೂಡ ಇಂದು ಅಪಡೇಟ್ ಆಗುತ್ತಿದೆ.
ಗುರುವಿನ ಮುಂದೆಯೇ ಶಿಷ್ಯರು ಗೌರವ ನೀಡದೇ ಇರುವುದು ಅತ್ಯಂತ ಕೆಟ್ಟ ಸಂಗತಿಯೂ ಕೂಡ. ಸಾಧ್ಯವಾದರೆ ಗುರುಗಳನ್ನು ಗೌರವಿಸಿ, ಅವರು ಕೊಟ್ಟ ಆ ಭಿಕ್ಷೆಯ ಪಾಠವನ್ನು ಅಭ್ಯಾಸ ಮಾಡಿ , ನಾನು ಇಂತಹ ಗುರುವಿನ ಶಿಷ್ಯ ಎಂದು ನೀವು ಎಲ್ಲಿಯಾದರೂ ಹೇಳಿಕೊಂಡರೆ ಮೊದಲು ಆನಂದ ಭಾಷ್ಪ ಬರುವುದು ಗುರುವಿಗೆ ಹೊರತು ಇನ್ಯಾರಿಗೂ ಅಲ್ಲ.
– ಯಶಸ್ವಿ ದೇವಾಡಿಗ.
ಪತ್ರಿಕೋದ್ಯಮ ವಿದ್ಯಾರ್ಥಿನಿ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ..
ಒಳ್ಳೆಯ ಬರಹ .