ಪ್ರಮುಖ ಸುದ್ದಿ
ಸಿಎಂ ಓರ್ವ ಮೂರ್ಖ – ಯಡಿಯೂರಪ್ಪ ಹೇಳಿಕೆ
ಸಿಎಂ ಓರ್ವ ಮೂರ್ಖ- ಯಡಿಯೂರಪ್ಪ
ಗಜೇಂದ್ರಗಡಃ ಮುಖ್ಯಮಂತ್ರಿ ಅವರು ದೇಶದ ಯೋಧರ ಬಗ್ಗೆ ಹಗುರವಾಗಿ ಮಾತನಾಡಿರುವದು ಸರಿಯಲ್ಲ. ಆ ಮೇಲೆ ಮಂಡ್ಯದಲ್ಲಿ ಸುಮಲತಾ ಅವರು ಗೆಲ್ತಾರೆ ಅನ್ನೋ ಕಾರಣಕ್ಕೆ ಅವರು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪ್ರಚಾರ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮೂರ್ಖ ಸಿಎಂ ಮಗನ ಸೋಲಿನ ಭೀತಿಯಲ್ಲಿ ಏನೇನೋ ಮಾತಾನಾಡುತ್ತಿದ್ದಾರೆ.
ಯೋಧರ ಬಗ್ಗೆಯು ಮಾತನಾಡಿರುವದು ಸರಿಯಲ್ಲ. ಬರಿ ಬಡವರೇ ಯೋಧರಾಗ್ತಾರೆ. ಇದ್ದವರಾರು ಹೋಗಲ್ಲ ಎಂದಿರುವದು ಯೋಧರಿಗೆ ಅಪಮಾನ ಮಾಡಿದಂತೆ ಎಂದು ಅವರು ಆರೋಪಿಸಿದರು.