ಶಹಾಪುರಃ ಜೆಸ್ಕಾಂ ಶಾಖೆಯಲ್ಲಿ ಆಯುಧ ಪೂಜೆ
ಶಹಾಪುರಃ ನಗರದ ಕೈಗಾರಿಕೆ ಇಲಾಖೆ ಏರಿಯಾದಲ್ಲಿರುವ ಗುಲ್ಬರ್ಗಾ ವಿದ್ಯುತ್ ಸರಬರಾಜು ಶಾಖಾ ಕಚೇರಿಯಲ್ಲಿ ಸೋಮವಾರ ಆಯುಧ ಪೂಜೆ ಅಂಗವಾಗಿ ಕಚೇರಿಯನ್ನು ಸ್ವಚ್ಛಗೊಳಿಸಿ ದುರ್ಗಾ ಮಾತೆಗೆ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂ ಶಾಖಾ ಅಧಿಕಾರಿ ಎಕ್ಬಾಲ್ ಲೋಹಾರಿ, ಆಯುಧ ಪೂಜೆ ಅಂಗವಾಗಿ ಎಲ್ಲಾ ಯಂತ್ರೋಪಕರಣಗಳು, ಮತ್ತು ನೌಕರರ ವಾಹನಗಳಿಗೂ ವಿಶೇಷ ಪೂಜೆ ಸಲ್ಲಿಸಿ ಕುಂಬಳಕಾಯಿಯನ್ನು ಹೊಡೆದು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಣೆಗೆ ಶಕ್ತಿ ಮಾತೆ ಆಶೀರ್ವಾದವಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರತಿ ವರ್ಷ ಎಲ್ಲಾ ನೌಕರರು ಸೇರಿ ದುರ್ಗಾ ಮಾತೆಯ ಪೂಜೆ ಸಲ್ಲಿಸುತ್ತೇವೆ. ನಿತ್ಯ ಹಗಲು ರಾತ್ರಿ ವಿದ್ಯುತ್ ಜೊತೆ ಕೆಲಸ ನಿರ್ವಹಿಸುವ ನಾವುಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತವಾಗಿ ಕಾರ್ಯನಿರ್ವಹಿಸಲು ಸಾಮಥ್ರ್ಯ ನಿಡುವಂತೆ ಶಕ್ತಿ ಮಾತೆಯಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಆನಂದ ಕೋಲ್ಕಾರ, ನಾರಾಯಣ, ಬಂದಯ್ಯ ಸ್ವಾಮಿ ಸೇರಿದಂತೆ ಇತರರು ಇದ್ದರು.