ಶಹಾಪುರ ಪೊಲೀಸ್ ಠಾಣೆಗೆ ಕಾಲಿಟ್ಟ ಕೊರೊನಾ.?
ಶಹಾಪುರ ಪೊಲೀಸ್ ಠಾಣೆ ಸಿಬ್ಬಂದಿವೋರ್ವಗೆ ಕೊರೊನಾ.?
ಯಾದಗಿರಿಃ ಜಿಲ್ಲೆಯ ಶಹಾಪುರ ನಗರ ಪೊಲೀಸ್ ಠಾಣೆ ಸಿಬಂದ್ದಿ ಓರ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ವರದಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಠಾಣೆಯಲ್ಲಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದ ಓರ್ವರಿಗೆ ಕೊರಿನಾ ತಗಲಾಕುಕೊಂಡಿದೆ ಎನ್ನಲಾಗಿದೆ.
ಆದರೆ ತಾಲೂಕು ವೈದ್ಯಾಧಿಕಾರಿಗಳಾಗಲಿ ಅಥವಾ ಸಂಬಂಧಿತ ತಾಲೂಕಾಡಳಿತ, ಜಿಲ್ಲಾಡಳಿತ ಈ ಕುರಿತು ಸ್ಪಷ್ಟನೆ ನೀಡಿಲ್ಲ.
ಆದರೆ ಮೂಲಗಳಿಂದ ಠಾಣಾ ಸಿಬ್ಬಂದಿ ಓರ್ವರಿಗೆ ಪಾಸಿಟಿವ್ ದೃಢಪಟ್ಟಿರುವ ವಿಷಯ ಮೂಲಗಳಿಂದ ಸುದ್ದಿಗಾರರು ಖಚಿತ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಶಹಾಪುರ ಠಾಣೆ ಸೀಲ್ ಡೌನ್..? ಮರಳು ಸಾಗಾಣಿಕೆದಾರರಿಗೂ ಕ್ವಾರಂಟೈನ್..! ಹಿಸ್ಟರಿ ಆಧರಿಸಿ ಕ್ರಮ..?
ಇಲ್ಲಿನ ಪೊಲೀಸ್ ಸಿಬ್ಬಂದಿ ಓರ್ವರಿಗೆ ಕೊರೊನಾ ಬಂದಿರುವ ವಿಷಯಧಾರಿಸಿದ ಮೇಲೆ ಅನಿವಾರ್ಯವಾಗಿ ನಗರ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಬೇಕಾಗುತ್ತದೆ ಮತ್ತು ಪೊಲೀಸ್ ಸಿಬ್ಬಂದಿಯನ್ನೆಲ್ಲ ಕ್ವಾರಂಟೈನ್ ನಲ್ಲಿಡಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.
ಸೀಲ್ ಡೌನ್ ನಿಯಮದಂತೆ ನಿಗದಿ ಪಡಿಸಿದ ದಿನಗಳು ಮುಗಿಯುವವರೆಗೂ ಠಾಣೆಯ ಕಾರ್ಯಭಾರ ಜವಬ್ದಾರಿ ಹತ್ತಿರದ ಠಾಣೆಗೆ ವಹಿಸಬೇಕಾಗುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಸ್ಪಷ್ಟತೆ ನೀಡಬೇಕಿದೆ.
ಮರಳು ಸಾಗಾಣಿಕೆ ವ್ಯಾಪಾರಸ್ಥರಿಗೂ ಪೊಲೀಸ್ ರಿಗೂ ಅವಿನಾಭಾವ ಸಂಬಂಧ, ಮರಳು ಮಾರಾಟಗಾರರು ಹಾಗೂ ಪೊಲೀಸ್ ಇಲಾಖೆ ನಡುವೆ ಸಾಕಷ್ಟು ವ್ಯವಹಾರಿಕಾ ಮಾತುಕತೆಗಳಿದ್ದು, ಕೊರೊನಾ ಪಾಸಿಟಿವ್ ಪೊಲೀಸ್ ಹಿಸ್ಟರಿ ನೋಡಿದ್ದಲ್ಲಿ ನೂರಾರು ಜನ ಕ್ವಾರಂಟೈನ್ ಸೇರುವ ಸಾಧ್ಯತೆ ಇದೆ.
ಠಾಣೆಯಲ್ಲಿರುವ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಕನ್ಫರ್ಮೇಷನ್ ಬಂದರೆ ಹೇಳಬಹುದು.
-ಚಂದ್ರಕಾಂತ ಮೆಕಾಲೆ. PSI. ಶಹಾಪುರ.