ಪ್ರಮುಖ ಸುದ್ದಿ

ವಿಶ್ವದ ಅತಿ ಎತ್ತರದ ಏಕ ಶಿಲಾ ಏಸು ಪ್ರತಿಮೆ ನಿರ್ಮಾಣ..ಎಲ್ಲಿ ಗೊತ್ತಾ.?

ವಿಶ್ವದ ಅತಿ ಎತ್ರರದ ಏಸು ಶಿಲಾ ಪ್ರತಿಮೆಗೆ ಡಿಕೆಶಿ ಶಿಲಾನ್ಯಾಸ

ವಿಶ್ವದ ಅತಿ ಎತ್ತರದ ಏಕ ಶಿಲಾ ಏಸು ಪ್ರತಿಮೆ ನಿರ್ಮಾಣ ಯಾವ ಜಿಲ್ಲೆಯಲ್ಲಿ ಗೊತ್ತೆ.?

ವಿವಿ‌ಡೆಸ್ಕ್ಃ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕ ಶಿಲೆ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ ಕ್ರಿಸ್ಮಸ್‌ ಹಬ್ಬದ ಶುಭದಿ‌ನ ಬುಧವಾರ ನೆರವೇರಿಸಿದರು.

ಅರರೇ ಇದು ಎಲ್ಲಿ ಯಾವ ಜಿಲ್ಲೆ ರಾಜ್ಯ ಇರಬಹುದು  ಎಂಬ ತಿಳಿದುಕೊಳ್ಳೊ ತವಕನಾ..? ಸರಿ ಸರಿ ಇದು ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಇಲ್ಲಿನ ಕಪಾಲಿ ಬೆಟ್ಟದ ಹತ್ತು ಎಕರೆ ಜಾಗವನ್ನು ಡಿ.ಕೆ.ಶಿವಕುಮಾರ ತಮ್ಮ ಸ್ವಂತ ಹಣವನ್ನು ಸರ್ಕಾರಕ್ಕೆ ಪಾವತಿಸಿ ಜಾಗ ಪಡೆದಿದ್ದು, ಪ್ರತಿಮೆ ನಿರ್ಮಾಣ ಟ್ರಸ್ಟ್ ನವರಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

ಹಾರೋಬೆಲೆ ಗ್ರಾಮದಲ್ಲಿ ಶೇ.99 ರಷ್ಟು ಜನ ಕ್ರೈಸ್ತ ಸಮುದಾಯದವರಿದ್ದಾರೆ. ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ನಿರ್ಮಾಣದಂತಹ ಪವಿತ್ರ ಕಾರ್ಯಕ್ಕೆ ಸಹಕಾರ ನೀಡಿದ ಡಿ.ಕೆ.ಶಿವಕುಮಾರ ಮತ್ತು ಅವರ ಸಹೋದರ ಡಿ.ಕೆ.ಸುರೇಶ ಅವರಿಗೆ ಕ್ರೈಸ್ತ ಸಮುದಾಯ ಕೃತಜ್ಞತೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಎಂಎಲ್ಸಿ ರವಿ, ಟ್ರಸ್ಟಿನ ಚಿನ್ನರಾಜು ಇತರರು ಉಪಸ್ಥಿತರಿದ್ದರು.

ಮಾಹಿತಿಃ 114 ಅಡಿ ಎತ್ತರದ ಪ್ರತಿಮೆ ಪೈಕಿ 13 ಅಡಿ ಮೆಟ್ಟಿಲುಗಳಿದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣ ಗೊಂಡಿದೆ.

ಯೇಸು ಸ್ವಾಮಿಯ ಪ್ರತಿಮೆಯ ಬಲಪಾದದ ಕಲ್ಲಿಗೆ ಪೂಜೆ ಸಲ್ಲಿಸುವ ಮೂಲಕ ಈ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಯಿತು. ಮುಂದೆ ಹಾರೋಬೆಲೆ ಪ್ರಸಿದ್ಧಿ ಹೊಂದುವದರಲ್ಲಿ ಯಾವ ಸಂದೇಹವು ಇಲ್ಲ. ಅಲ್ಲದೆ ಕ್ರೈಸ್ತ ಸಮುದಾಯದ ಪವಿತ್ರ ಕ್ಷೇತ್ರವಾಗಿ ಬೆಳೆದು ನಿಲ್ಲಲಿದೆ ಎಂದು ಹೇಳಬಹುದು.

Related Articles

Leave a Reply

Your email address will not be published. Required fields are marked *

Back to top button