ಪ್ರಮುಖ ಸುದ್ದಿ
ಸಿಯಾಚಿನ್ ಹಿಮಪಾತಕ್ಕೆ ಸಿಲುಕಿದ ಯೋಧರಿಬ್ಬರು ಹುತಾತ್ಮ
ನವದೆಹಲಿಃ ದಕ್ಷಿಣ ಸಿಯಾಚಿನ್ ನೀರ್ಗಲ್ಲು ಪ್ರದೇಶದ 18,000 ಅಡಿ ಎತ್ತರದಲ್ಲಿ ಶನಿವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸೇನೆಯ ಗಸ್ತು ತಂಡವು ಹಿಮಪಾತಕ್ಕೆ ಸಿಲುಕಿದ್ದು, ತಂಡದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಗಸ್ತು ತಂಡವನ್ನು ಹಿಂಬಾಲಿಸುತ್ತಿದ್ದ ಹಿಮಪಾತ ರಕ್ಷಣಾ ತಂಡವು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಹಿಮದಡಿ ಸಿಲುಕಿದ್ದ ಎಲ್ಲ ಯೋಧರನ್ನು ಹೊರಕ್ಕೆ ತೆಗೆದು ಹೆಲಿಕಾಪ್ಟರ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಯೋಧರು ಕೊನೆಯುಸಿರೆಳೆದಿದ್ದಾರೆ.
ಕಳೆದ ವಾರ ಉತ್ತರ ಸಿಯಾಚಿನ್‌ನಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ಕೂಲಿಗಳು ಮೃತಪಟ್ಟಿದ್ದನ್ನು ಸ್ಮರಿಸಬಹುದು.