ಉಗ್ರರ ಹತ್ಯಾಧರ್ಮ ವಿನಾಶಕ್ಕೆ ಪಣ-ಶಿವಲಿಂಗಣ್ಣ ಸಾಹು
ಯಾದಗಿರಿ, ಶಹಾಪುರಃ ವೈರಿಗಳ ಗುಂಡು ಎದೆಗೆ ಸ್ವೀಕರಿಸಿ, ಶತ್ರು ರಾಷ್ಟ್ರಗಳ ಆಕ್ರಮಣದಿಂದ ಭಾರತವನ್ನು ರಕ್ಷಿಸುವ ಪ್ರಾಣಾರ್ಪಣೆ ಮಾಡುವ ಸೈನಿಕರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವುದು ತುಂಬಾ ನೋವಿನ ಸಂಗತಿ. ದೇಶದ ಸೈನಿಕರ ತ್ಯಾಗ ಚಿರಾಯುವಾಗಲಿ, ಧರ್ಮಾಂಧರ ಉಗ್ರರ ಹತ್ಯಾಧರ್ಮ ನಾಶವಾಗಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಹೇಳಿದರು.
ನಗರದ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಹಮ್ಮಿಕೊಂಡ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಭಾವಪೂರ್ಣ ನುಡಿ ನಮನ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಧರ್ಮಾಂಧ ಮನಕುಲದ ಶತ್ರುವಾಗಿದೆ. ಭಾರತೀಯರೆಲ್ಲರೂ ಒಂದಾಗಿ ಧರ್ಮಾಂಧತೆಯನ್ನು ಹೋಗಲಾಡಿಸಲು ಶ್ರಮಿಸಬೇಕೆಂದು ತಿಳಿಸಿದರು.
ವಿದ್ಯಾರ್ಥಿನಿ ಶಾಂತಾ ಮಾತನಾಡಿ, ದ್ವೇಷದ ದಳ್ಳುರಿಯಲ್ಲಿ ಮನುಷ್ಯತ್ವ ಮಾರಾಟವಾಗಿದೆ. ಮನುಷ್ಯತ್ವ ಮಾನವೀಯತೆ ಅರಿತು ನಡೆಯಬೇಕಿದೆ ಮನುಕುಲ ಕುರಿತು ಇಡಿ ಜಗ್ಗತ್ತಿಗೆ ಉತ್ತಮ ಸಂದೇಶ ಸಾರಿರುವದು ನಮ್ಮ ದೇಶ ಇದೆಲ್ಲವನ್ನು ಅರ್ಥೈಸಿಕೊಂಡು ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಭಾರತೀಯ ನಕಾಶೆ ಸುತ್ತಲೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಎರಡು ನಿಮಿಷ ಮೌನಾಚರಣೆ ನಡೆಸಿದರು.
ಅಲ್ಲದೆ ವಿಶೇಷವಾಗಿ ಈ ಸಂದರ್ಭದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಧರ್ಮಗಳ ಛದ್ಮಾ ವೇಷದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೇಶದ ಒಗ್ಗಟ್ಟು ಪ್ರದರ್ಶನ ಮಾಡಿರುವದು ಗಮನ ಸೆಳೆಯಿತು.
ಎನ್.ಎಸ್.ಎಸ್. ಅಧಿಕಾರಿಗಳಾದ ಸಂಗಣ್ಣ ದಿಗ್ಗಿ, ಶುಭಲಕ್ಷ್ಮೀ ಬಬಲಾದಿ, ಸಾಂಸ್ಕøತಿಕ ಕಾರ್ಯಕ್ರಮದ ಸಂಚಾಲಕ ಗಂಗಣ್ಣ ಹೊಸ್ಮನಿ ಹಾಗೂ ಉಪನ್ಯಾಸಕರು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.