ಪ್ರಮುಖ ಸುದ್ದಿ
ನಾಳೆ ಬೆಳಗ್ಗೆ 6 ಗಂಟೆಗೆ ಸಿಪಿಎಸ್ ಶಾಲಾ ಮೈದಾನದಲ್ಲಿ ಯೋಗ ದಿನಾಚರಣೆ
ಆರ್ಟ್ ಆಫ್ ಲಿವಿಂಗ್ & ವಿವಿಧ ಸಂಘ ಸಂಸ್ಥೆಗಳು ನೇತೃತ್ವ
ನಾಳೆ ಬೆಳಗ್ಗೆ 6 ಗಂಟೆಗೆ ಸಿಪಿಎಸ್ ಶಾಲಾ ಮೈದಾನದಲ್ಲಿ ಯೋಗ ದಿನಾಚರಣೆ
ಆರ್ಟ್ ಆಫ್ ಲಿವಿಂಗ್ ನೇತೃತ್ವ
ಶಹಾಪುರಃ ನಾಳೆ 10 ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜೂ. 21 ರಂದ ಬೆಳಗ್ಗೆ 6 ಗಂಟೆಯಿಂದ 7-30 ರವರೆಗೆ ಯೋಗ ಅಭ್ಯಾಸ ನಡೆಯಲಿದೆ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆರ್ಡ್ ಆಫ್ ಲಿವಿಂಗ್ ನ ಸಂಘಟಕರು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹಾಪುರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶಹಾಪುರ ಮತ್ತು ಅರಣ್ಯ ಇಲಾಖೆ ಯಾದಗಿರಿ ಜಿಲ್ಲೆ, ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘಗಳು ಮತ್ತು ಸಮುದಾಯಗಳು ಸಂಯುಕ್ತಾಶ್ರಯದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ ಸಮಸ್ತ ನಾಗರಿಕರು, ಶಿಕ್ಷಕರು, ದೈಹಿಕ ಶಿಕ್ಷಕರು ಸರ್ಕಾರಿ ನೌಕರರು ಎಲ್ಲರೂ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ತಿಳಿಸಿದ್ದಾರೆ.