ಭಗವಂತನ ಕಾರುಣ್ಯಕ್ಕೆ ಶ್ರೀ ಭಗವದ್ಗೀತೆ ಪೂರಕ
ಯಾದಗಿರಿ, ಶಹಾಪುರ: ವ್ಯೆಕ್ತಿ ಸುಧಾರಿಸದೆ ಸಮಾಜ ಸುಧಾರಣೆ ಅಸಂಭವ ಸಾಮಾಜಿಕ ಸಾಮರಸ್ಯ ಒಡಮೂಡದಿದ್ದರೆ ರಾಷ್ಟ್ರೀಯ ಐಕ್ಯತೆ ಸಾಧ್ಯವಿಲ್ಲ ಪ್ರತಿಯೊಬ್ಬರ ವ್ಯೆಕ್ತಿತ್ವದ ವಿಕಾಸಕ್ಕೆ ನೈತಿಕ ಶಿಕ್ಷಣ ಅಗತ್ಯವಾಗಿದ್ದು ಈದಿಸೆಯಲ್ಲಿ ಪರಿಪಕ್ವವಾದ ಮತ್ತು ಭಗವಂತನ ಕಾರುಣ್ಯಕ್ಕೆ ಸರ್ವಕಾಲಿಕವಾದ ಭಗವದ್ಗೀತೆ ಅಧ್ಯಯನ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಹಿರಿಯರಾದ ಕೋನೇರಾಚಾರ್ಯ ಸಗರ ತಿಳಿಸಿದರು.
ನಗರದ ಹಳಪೇಟೆಯ ವಿದ್ಯಾರ್ಥಿಗಳು ಭಗವದ್ಗೀತೆ ಅಭಿಯಾನ ನಿಮಿತ್ಯ ಭೀ.ಗುಡಿಯ ಶ್ರೀ ಬಲಭೀಮೇಶ್ವರ ದೇವಸ್ಥಾನದಲ್ಲಿ ಭಗವದ್ಗೀತಾ ಪಠಣವನ್ನು ಮಾಡಿದ ಸಂದರ್ಭದಲ್ಲಿ ಸರ್ವರಿಗೂ ಅಭಿಯಾನದ ಉದ್ದೇಶದ ಕರಪತ್ರ ನೀಡಿ ಅಭಪ್ರಾಯ ಹಂಚಿಕೊಂಡ ಅವರು ಗೀತಾ ಪಠಣವು ಆಧ್ಯಾತ್ಮಿಕ, ಮಾನಸಿಕ, ಹಾಗೂ ನೈತಿಕ ಉನ್ನತಿಯನ್ನು ಉಂಟುಮಾಡುತ್ತದೆ.
ಸರ್ವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾಜದಲ್ಲಿ ಸುಖಶಾಂತಿಯನ್ನು ನೆಲೆಸಲು ಪ್ರತಿವ್ಯೆಕ್ತಿಯನ್ನು ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡುವ ಉದ್ದೇಶ ಈ ಅಭಿಯಾನದಲ್ಲಿ ಅಡಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಬಲಭೀಮೇಶ್ವರ ದೇವಸ್ಥಾನದ ಪ್ರಮುಖರಾದ ಸಣ್ಣನಿಂಗಣ್ಣನಾಯ್ಕೋಡಿ, ಮುರುಳಿಧರ ದೇಶಪಾಂಡೆ ಅರ್ಚಕರಾದ ಸಿದ್ಧಣ್ಣಪೂಜಾರಿ ಸೇರಿದಂತೆ ಹಲವರು ಇದ್ದರು.