ಯುವಜನೋತ್ಸವಃ ಗಮನ ಸೆಳೆದ ಯುವ ಸಮೂಹ ನೃತ್ಯ
ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆ- ಯುವಕರ ಸಂಭ್ರಮ
ಯಾದಗಿರಿ, ಶಹಾಪುರಃ ಸಮೀಪದ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆದ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದ ಎರಡನೇ ದಿನವಾದ ಶುಕ್ರವಾರ ಯುವ ಸಮೂಹದಿಂದ ವಿವಿಧ ಸ್ಪರ್ಧೆಗಳು ಜರುಗಿದವು.
ರಂಗೋಲಿ, ಕೊಲಾಜ್ ತಯಾರಿಸುವ ಸ್ವರ್ಧೆ, ವ್ಯಂಗ್ಯ ಚಿತ್ರ ರಚನೆ ಸ್ವರ್ಧೆ, ಮಣ್ಣಿನಲ್ಲಿ ಆಕೃತಿ ಮಾಡುವ ಸ್ಪರ್ದೆ, ವಿಷಯ ಆಧಾರಿತ ವಿಷಯಗಳ ಕುರಿತು ಪರ ಮತ್ತು ವಿರುದ್ಧ ಇವುಗಳ ಚರ್ಚಾ ಸ್ಪರ್ಧೆ ಸೇರಿದಂತೆ ಭಾಷಣ ಮತ್ತು ಆಶು ಭಾಷಣ ಸ್ಪರ್ಧೆ ಜರುಗಿದವು.
ಇವುಗಳಲ್ಲದೇ ಸಮೂಹ ನೃತ್ಯ ಸ್ಪರ್ಧೆಗಳು ಅತ್ಯಂತ ಆಕರ್ಷಕವಾಗಿ ಜರುಗಿದವು. ವಿದ್ಯಾರ್ಥಿಗಳು ಮನಮೋಹಕ ಪ್ರದರ್ಶನ ಕಂಡು ವೀಕ್ಷಕರ ಮನಸೂರೆಗೊಂಡಿತು.
ಕೃಷಿ ಮಹಾವಿದ್ಯಾಲಯದ ವಿವಿಧ ವಿಭಾಗದ ಡೀನ್ ಸೇರಿದಂತೆ ವಿಜ್ಞಾನಿಗಳು, ಉಪನ್ಯಾಸಕರು ಪ್ರಾಧ್ಯಾಪಕರು ಕೃಷಿ ವಿಸ್ತೀರಣ ಅಧಿಕಾರಿಗಳು ಇತರೆ ಗಣ್ಯರು ಭಾಗವಹಿಸಿದ್ದರು. ಐದು ಕೃಷಿ ಮಹಾವಿಧ್ಯಾಲಯದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಗಣ್ಯರು ಸೇರಿದಂತೆ ವಿದ್ಯಾರ್ಥಿಗಳಿಗೆ ಸಮರ್ಪಕ ಊಟದ ವ್ಯವಸ್ಥೆ, ಮೂಲ ಸೌಲಭ್ಯ ಕಲ್ಪಿಸಲಾಗಿತ್ತು. ಸಾಂಸ್ಕøತಿ ಸ್ಪರ್ಧೆಯ ನಂತರ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತ ತಂಡಕ್ಕೆ ಪ್ರಶಸ್ತಿ ಪತ್ರ ಸೇರಿದಂತೆ ಸೂಕ್ತ ಬಹುಮಾನ ವಿತರಿಸಲಾಗುವದು ಎಂದು ಆಯೋಕರು ತಿಳಿಸಿದ್ದಾರೆ.