ಪ್ರಮುಖ ಸುದ್ದಿ
ಹುರಸಗುಂಡಗಿ ಗ್ರಾಮಕ್ಕೆ ಜಿಪಂ ಸಿಇಓ ಭೇಟಿ ಪರಿಶೀಲನೆ
ಹುರಸಗುಂಡಗಿ ಗ್ರಾಮಕ್ಕೆ ಸನ್ನತಿ ಹಿನ್ನೀರು ಗ್ರಾಮ ತೊರೆಯಲು ಸೂಚನೆ
ಯಾದಗಿರಿ, ಶಹಾಪುರಃ ಭೀಮಾ ನದಿ ಪ್ರವಾಹ ಭೀತಿ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಉಂಟಾಗಿರುವ ಹಿನ್ನೆಲೆ, ಗುರುವಾರ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕವಿತಾ ಮನ್ನಿಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ ತಾಲೂಕು ಆಡಳಿತ ಅಧಿಕಾರಿಗಳ ಮತ್ತು ಗ್ರಾಮಸ್ಥರ ಜೊತೆ ಚರ್ಚಿಸಿ ಗ್ರಾಮಸ್ಥರನ್ನು ಹಳೇ ಗ್ರಾಮ ತೊರೆಯುವಂತೆ ಸೂಚಿಸಿದರು. ಅಲ್ಲದೆ ಭೀಮಾನದಿಗೆ ಇನ್ನಷ್ಟು ನೀರು ಹರಿದು ಬರುತ್ತಿರುವ ಹಿನ್ನೆಲೆ ಸನ್ನತಿ ಹಿನ್ನೀರು ಗ್ರಾಮಕ್ಕೆ ನುಗ್ಗುವ ಸಾಧ್ಯತೆ ಜಾಸ್ತಿ ಇದೆ.
ಕಾರಣ ಇಂದೇ ಗ್ರಾಮಸ್ಥರು ನವಗ್ರಾಮಕ್ಕೆ ತೆರಳಬೇಕು. ನದಿ ತೀರಕ್ಕೆ ಜನ ಜಾನುವಾರು ಸೇರಿದಂತೆ ಯಾರೊಬ್ಬರು ಬಾರದಂತೆ ಎಚ್ಚರಿಕೆವಹಿಸಲು ತಿಳಿಸಿದರು. ಮತ್ತು ಪ್ರವಾಹ ಎದುರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.