ವಿಜಯಪುರ ZP ಮೌಢ್ಯಕ್ಕೆ ಶರಣಾಗಲು ಕಾರಣವೇನು.? ಪ್ರಗತಿಪರರು ಏನಂತಾರೆ.?
ಜಿಪಂ ಸದಸ್ಯರು ಸಾಮಾನ್ಯ ಸಭೆ ಮುಂದೂಡಿರುವುದು ಏಕೆ.?
ವಿಜಯಪುರಃ ರಾಜ್ಯದ ಕಾಂಗ್ರೆಸ್ ಸರ್ಕಾರ ಮೊನ್ನೆ ಅಧಿವೇಶನದಲ್ಲಿ ಹರಸಾಹಸ ಪಟ್ಟು ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡಿದ್ದರೂ.. ಇಲ್ಲಿನ ಕಾಂಗ್ರೆಸ್ ಆಡಳಿತದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಇಂದು ಛಟ್ಟಿ ಅಮಾವಾಸ್ಯೆ, ಸದಸ್ಯರೆಲ್ಲರೂ ಅವರ ಇಷ್ಟದ, ಮನೆ ದೇವರಿಗೆ, ದೇವಸ್ಥಾನಕ್ಕೆ ಹೋಗುವ ತರಾತುರಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಸಭೆಗೆ ಹಾಜರಾಗುವುದು ಕಷ್ಟಕರ ಎಂಬ ಕಾರಣ ನೀಡಿ ಸಾಮಾನ್ಯ ಸಭೆ ಮುಂದೂಡಿದ ಘಟನೆ ಜರುಗಿದೆ.
ಸಾಮಾನ್ಯ ಸಭೆ ಮುಂದೂಡಲು ಕಾಂಗ್ರೆಸ್ ಸದಸ್ಯರಿಂದಲೇ ಒಕ್ಕೊರಲ ಆಗ್ರಹವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸಿದ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರೇ ಅಮಾವಾಸ್ಯೆ ನಿಮಿತ್ತ ಮತ್ತು ಪೂಜಾ , ದೆವರ ದರ್ಶನ, ವಾಹನಗಳ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳು ಮನೆಯಲ್ಲಿದ್ದು, ಸಾಮಾನ್ಯ ಸಭೆಗೆ ಬರುವುದು ಆಗುವುದಿಲ್ಲ ಎಂಬ ನೆಪವೊಡ್ಡಿ ಸಾಮಾನ್ಯ ಸಭೆ ಮುಂದೂಡುವಂತೆ ಜಿಪಂ ಅಧ್ಯಕ್ಷೆ ನೀಲಮ್ಮ ಇವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಜಿಪಂ ಅಧ್ಯಕ್ಷೆ ಸಾಮಾನ್ಯ ಸಭೆ ಮುಂದೂಡಲು ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಕಾಂಗ್ರೆಸ್ ಆಡಳಿತ ಜಿಪಂ ಕಚೇರಿ ಆಗಿದ್ದು, ಕಾಂಗ್ರೆಸ್ ಯಾವಾಗಲೂ ಪ್ರಗತಿಪರ ನಿಲುವು ಹೊಂದಿದ್ದು, ಆದರೆ ಅವರ ಸದಸ್ಯರುಗಳು ಇಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಒತ್ತು ನೀಡಿರುವುದು ನೋಡಿದರೆ, ಮನೆಯಲ್ಲಿ ಒಂದು ಧಾರ್ಮಿಕ ಆಚರಣೆವಿದ್ದರೆ, ಬಾಯಿಯಲ್ಲಿ ಹೇಳೋದು ಹೊರಗಡೆ ಒಂದು ರೀತಿ ಆಚರಣೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕಾಂಗ್ರೆಸ್ ಪಕ್ಷದ ಇಂತಹ ಡಾಂಭಿಕ ನಿಲುವಿನ ಬಗ್ಗೆ ಸಾರ್ವಜನಿಕರು ಮಾತಾಡಿಕೊಳ್ಳುವಂತಾಗಿದೆ. ಹೀಗಾಗಿ ಈ ಬಗ್ಗೆ ಅವರದೇ ಪಕ್ಷದ ಮುಖಂಡರು ಏನು ಸಮರ್ಥನೆ ನೀಡುತ್ತಾರೋ ಅಥವಾ ಜಾರಿಕೊಳ್ಳುತ್ತಾರೋ ಕಾದು ನೋಡಬೇಕು.